Cinema

ಪ್ರಜ್ವಲ್‌ ನಟನೆಯ ಮಾಫಿಯಾ ಟೀಸರ್‌ ಬಿಡುಗಡೆ

ಬೆಂಗಳೂರು ಕುಮಾರ್‌ ಫಿಲಂಸ್‌ ಅವರ ಬ್ಯಾನರ್‌ ಅಡಿಯಲ್ಲಿ ಲೋಹಿತ್‌ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾಫಿಯ ಚಿತ್ರದ ಫರ್ಸ್ಟ್‌ ಲುಕ್‌ ಟೀಸರ್‌ ಒಂದು ಬಿಡುಗಡೆಯಾಗಿದೆ. ಪ್ರಜ್ವಲ್‌ ದೇವರಾಜ್‌ ಅವರು ಟೀಸರ್‌ನಲ್ಲಿ ಖಡಕ್‌ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಈಗ ಆನಂದ್‌ ಆಡಿಯೋ ಯೂಟ್ಯಬ್‌ ಮೂಲಕ ಟೀಸರ್‌ ಬಿಡುಗಡೆಗೊಂಡಿದೆ. ಮೂರು ಭಾಷೆಗೂ ಅನ್ವಯವಾಗುವಂತೆ ಸಂಭಾಷಣೆ ರಹಿತ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಚಿತ್ರದ ಆಡಿಯೋ ಹಕ್ಕನ್ನು ಭಾರಿ ಮೊತ್ತಕ್ಕೆ ಆನಂದ್‌ ಆಡಿಯೋ ಖರೀದಿಸಿದೆ. ಈ ಸಿನಿಮಾದಲ್ಲಿ ಪ್ರಜ್ವಲ್‌ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ. ದೇವರಾಜ್‌ ಅವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ಸಾಧು ಕೋಕಿಲ ಸೇರಿದಂತೆ ಮುಂತಾದವರು ತಾರಾ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮುಂಚೆ ಹಾರರ್‌ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ಲೋಹಿತ್‌ ಅವರು ಈಗ ಆಕ್ಷನ್‌ ಸಿನಿಮಾಗೆ ಕೈ ಹಾಕಿದ್ದಾರೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ಸಿನಿಮಾ ತಯಾರಾಗುತ್ತಿದೆ.

Share Post