Cinema

ಯಶ್‌ ಹುಟ್ಟುಹಬ್ಬಕ್ಕೆ ಕಾಮನ್‌ ಡಿಪಿ ಬಿಡುಗಡೆ

ಬೆಂಗಳೂರು: ಕೆಜಿಎಫ್‌ ಸಿನಿಮಾ ಮೂಲಕ ಜನಪ್ರಿಯ ನಟನಾಗಿದ್ದ ಯಶ್‌ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇವರಿಗೆ ವಿಶ್‌ ಮಾಡಲು ಅಭಿಮಾನಿಗಳು ಬೆಳಗ್ಗೆಯಿಂದಲೂ ಕಾತುರದಿಂದ ಕಾಯುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ  ಮಾಡುವುದಕ್ಕೆ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದರೆ ಕೊರೋನಾ ಹೆಚ್ಚಳದ ಹಿನ್ನೆಲೆ ಯಶ್‌ ಎರಡು ವರ್ಷದಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಈ ಬಾರಿ ಕೂಡ ಹುಟ್ಟುಹಬ್ಬ ಆಚರಿಸದಂತೆ ಫ್ಯಾನ್ಸ್‌ ಗಳಿಗೆ  ರಾಕಿಂಗ್‌ ಸ್ಟಾರ್‌ ಯಶ್‌  ಮನವಿ ಮಾಡಿದ್ದರು. ಇದೀಗ ನಿರ್ದೇಶಕ ಪವನ್‌ ಒಡೆಯರ್‌ ಹುಟ್ಟುಹಬ್ಬದ ಪ್ರಯುಕ್ತಕಾಮನ್‌ ಡಿಪಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳು ಆನ್‌ ಲೈನ್‌ ಟ್ರೆಂಡ್‌ ಮಾಡಲು ರೆಡಿಯಾಗಿದ್ದಾರೆ.ಇನ್ನು ಯಶ್‌ ಹುಟ್ಟುಹಬ್ಬಕ್ಕಾಗಿ ಅಭಿಮಾನಿಯೊಬ್ಬ ಶಾಲೆಗೆ ರಜೆ ಕೊಡುವುದಕ್ಕೆ ಮನವಿ ಮಾಡಿಕೊಂಡಿದ್ದನು. ಜನವರಿ 8 ರಂದು ಯಶ್ ಹುಟ್ಟುಹಬ್ಬವಿದೆ. ಹೀಗಾಗಿ ಯಶ್ ಅಭಿಮಾನಿಗಳು ಹುಟ್ಟುಹಬ್ಬವನ್ನು ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್ ಮಾಡಲು ರೆಡಿಯಾಗಿದ್ದಾರೆ. ಇದರಲ್ಲಿ ನಾವು ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದನು.

Share Post