National

ದೇಶದಲ್ಲಿ ಕೊರೊನಾ ಸ್ಪೋಟ : ಒಂದೇ ದಿನ 1,41,896 ಕೇಸ್‌

ನವದೆಹಲಿ : ಕೋವಿಡ್‌ ಮೂರನೇ ಅಲೆ ತನ್ನ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಸಾರ್ವಜನಿಕ ಜೀವನಕ್ಕೆ ಸಾಕಷ್ಟು ತೊಂದರೆ ತಂದು ಒಡ್ಡುತ್ತಿದೆ. ಎಲ್ಲಾ ರಾಜ್ಯಗಳು ಪ್ರತ್ಯೇಕ ಮಾರ್ಗಸೂಚಿಗಳನ್ನು ಅನುಸರಿಸಿ ಕೊರೊನಾ ನಿಯಂತ್ರಿಸಲು ಪ್ರಯತ್ನಿಸುತಿವೆಯಾದರೂ ಕೇಸ್‌ಗಳು ಮಾತ್ರ ಕಮ್ಮಿ ಆಗ್ತಿಲ್ಲ. ಇನ್ನು ತಜ್ಞರ ವರದಿ ಪ್ರಕಾರ ಮೂರನೆ ಅಲೆಯಲ್ಲಿ ದಿನವೊಂದಕ್ಕೆ 10 ಲಕ್ಷಕ್ಕೂ ಹೆಚ್ಚು ಕೇಸ್‌ ವರದಿ ಆಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಕಳೆದ ೨೪ ಗಂಟೆಯಲ್ಲಿ  1,41,896 ಕೋವಿಡ್ ಕೇಸ್‌  ದಾಖಲಾಗಿದೆ. ಮೂರನೇ ರೂಪಾಂತರಿ ತಳಿ ಓಮಿಕ್ರಾನ್‌ ಕೂಡ ತನ್ನ ಆರ್ಭಟ ಹೆಚ್ಚಿಸಿದೆ. ಮೆಟ್ರೊಪಾಲಿಟನ್‌ ಸಿಟಿಗಳಲ್ಲಿ ಕೋವಿಡ್‌ ಕೇಸ್‌ಗಳು ಹೆಚ್ಚು ಹೆಚ್ಚು ದಾಖಲಾಗುತ್ತಿದೆ.  ಇಂದು ಕೂಡ ಬೆಂಗಳೂರಲ್ಲಿ 7  ಸಾವಿರಕ್ಕೂ ಹೆಚ್ಚು ಕೇಸ್‌ ಬರುವ ಸಾಧ್ಯತೆ ಇದೆ.

ಇನ್ನು ದೇಶಾದ್ಯಂತ ಕೋವಿಡ್‌ ಕಾರಣದಿಂದ ಕಳೆದ ೨೪ ಗಂಟೆಯಲ್ಲಿ  285 ಜನ ಜೀವ ಕಳೆದುಕೊಂಡಿದ್ದಾರೆ. ಮಾರ್ಚ್‌ ಅಂತ್ಯದವರೆಗೆ ಮೂರನೇ ಅಲೆ ಮುಂದುವರೆಯುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

Share Post