Politics

ಮೇಕೆದಾಟು ವಿಚಾರ : ಕರ್ನಾಟಕಕ್ಕೆ ಅನ್ಯಾಯವಾಗಲು ಕಾಂಗ್ರೆಸ್‌ ಕಾರಣ – ಬಿಜೆಪಿ ಟ್ವೀಟ್‌

ಬೆಂಗಳೂರು : ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಯೂ ಕಾವೇರಿದೆ. ಇದರ ನಡುವೆ ಕಾಂಗ್ರೆಸ್‌ ಮತ್ತು ಬಿಜೆಪಿ ಟ್ವೀಟ್‌ ವಾರ್‌ ಶುರುಮಾಡಿಕೊಂಡಿದೆ.

ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ಅನ್ಯಾಯವಾಗಲು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ.

ಕೋವಿಡ್‌ ಮೂರನೇ ಅಲೆ ಸಂಬಂಧ ರಾಜ್ಯಾದ್ಯಾಂತ ನೈಟ್‌ ಕರ್ಫ್ಯೂ , ವೀಕೆಂಡ್‌ ಕರ್ಫ್ಯೂ ಹೇರಿದ್ದರೂ ಕೂಡ ಕಾಂಗ್ರೆಸ್‌ ತನ್ನ ಪಾದಯಾತ್ರೆಯನ್ನು ಮಾತ್ರ ನಿಲ್ಲಿಸಲ್ಲ ಎಂದು ಹೇಳಿದೆ. ಇದು ಕೋವಿಡ್‌ ಕರ್ಫ್ಯೂ ಅಲ್ಲ ಬಿಜೆಪಿ ಕರ್ಫ್ಯೂ ಎಂದು ಕಾಂಗ್ರೆಸ್‌ ಟೀಕೆ ಮಾಡುತ್ತಿದೆ. ಇತ್ತ ಬಿಜೆಪಿಯವರು ಕೂಡ ಇಷ್ಟಕ್ಕೆಲ್ಲಾ ಕಾರಣ ಕಾಂಗ್ರೆಸ್‌ ಸರ್ಕಾರ ಎಂದು ಟ್ವೀಟ್‌ ದಾಳಿ ನಡೆಸಿದೆ.

ಕಾಂಗ್ರೆಸ್ಸಿಗರು ಅಂದು ಕಾಲಹರಣ ಮಾಡಿ ಇಂದು  ಸುಳ್ಳಿನ ಜಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಟ್ವೀಟಿಸಿದೆ.

 

Share Post