Cinema

ನನಗೆ ಶ್ರೀಮಂತ ಹುಡುಗ ಬೇಕಿಲ್ಲ : ಹರ್ನಾಜ್‌ ಸಂಧು

ಮುಂಬೈ : ಇತ್ತೀಚೆಗಷ್ಟೇ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಹರ್ನಾಜ್‌ ಸಂಧು ತಮ್ಮ ಬಾಯ್‌ಫ್ರೆಂಡ್‌ ಬಗ್ಗೆ ಮಾತನಾಡಿದ್ದಾರೆ. ನನಗೆ ಡೇಟಿಂಗ್ ಮಾಡಲು ವಯಸ್ಸಾದ ಶ್ರೀಮಂತ ಬೇಡ. ಕಷ್ಟದಲ್ಲಿರುವವನ ಜೊತೆ ನಾನು ಡೇಟಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಮಾತನಾಡುತ್ತ ತಮ್ಮ ಡೇಟಿಂಗ್‌ ವಿಚಾರವಾಗಿ ಮಾತನಾಡಿದ ಹರ್ನಾಜ್‌ ಸಖತ್‌ ಬೋಲ್ಡ್‌ ಸ್ಟೇಟ್ಮೆಂಟ್‌ ನೀಡಿದ್ದಾರೆ. ನಾನು ಕಷ್ಟಪಡುವ ಹುಡುಗನನ್ನು ಡೇಟ್‌ ಮಾಡೋಕೆ ಇಷ್ಟ ಪಡ್ತೀನಿ. ವಯಸ್ಸಾದ ಶ್ರೀಮಂತ ನನಗೆ ಬೇಡ. ನಾನು ಜೀವನದಲ್ಲಿ ಕಷ್ಟಪಟ್ಟಿದ್ದೇನೆ ಮತ್ತು ಕಷ್ಟಪಡುತ್ತೇನೆ. ಜೀವನದಲ್ಲಿ ಹೋರಾಟ ಮಾಡೋದು ತುಂಬಾ ಮುಖ್ಯ ಎಂದು ನಾನು ನಂಬಿದ್ದೇನೆ.

Share Post