ಖ್ಯಾತ ಗಾಯಕಿ ರುಕ್ಸಾನಾ ಬಾಬು ಹಠಾತ್ ಸಾವು!; ವಿಷಪ್ರಾಶನ ಮಾಡಿದರಾ..?
ಒಡಿಶಾ; ಒಡಿಶಾದ 27 ವರ್ಷದ ಖ್ಯಾತ ಗಾಯಕಿ ರಕ್ಸಾನಾ ಬಾನು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ.. ಅವರಿಗೆ ವಿಷಪ್ರಾಶನ ಮಾಡಿ ಸಾಯಿಸುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.. ರುಕ್ಸಾನಾ ಬಾನು ಅವರು ಒಡಿಶಾದ ಪ್ರಸಿದ್ಧ ಸಂಬಲ್ಪುರಿ ಗಾಯಕಿಯಾಗಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.. ಆಕೆಗೆ ವಿಷಪ್ರಾಶನ ಮಾಡಿ ಸಾಯಿಸಿರಬಹುದು ಎಂದು ಆಕೆಯ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ..
ರುಕ್ಸಾನಾ ಬಾನು ಅವರು ಸಕ್ರಬ್ ಟೈಪೂಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.. ಸೆಪ್ಟೆಂಬರ್ 18ರಂದು ಆಕೆಗೆ ಈ ಕಾಯಿಲೆ ಇರುವುದು ದೃಢಪಟ್ಟಿತ್ತು.. ಆದ್ರೆ ಇದೀಗ ರುಕ್ಸಾನಾ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ.. ಚಿಕಿತ್ಸೆ ಕೊಟ್ಟ ಆಸ್ಪತ್ರೆಯವರು ಸಾವಿಗೆ ಸರಿಯಾದ ಕಾರಣ ಹೇಳುತ್ತಿಲ್ಲ.. ಹೀಗಾಗಿ ವಿಷಪ್ರಾಶನ ಆಗಿರಬಹುದೆಂದು ಶಂಕಿಸಲಾಗಿದೆ..
ರುಕ್ಸಾನಾ ತಾಯಿ ಹಾಗೂ ಸಹೋದರಿ ರುಕ್ಸಾನಾಗೆ ವಿಷಪ್ರಾಶನ ಮಾಡಿದ್ದಾರೆ. ಇದರಿಂದಲೇ ಆಕೆ ಸತ್ತಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ.. ರುಕ್ಸಾನಾ ಬಾನು ಅವರಿಗೆ ವಿರೋಧಿಯಾಗಿದ್ದ ಪಶ್ಚಿಮ ಒಡಿಶಾದ ಗಾಯಕಿ ಆಕೆಗೆ ವಿಷವಿಕ್ಕಿದ್ದಾಳೆ ಎಂಬು ಆಕೆಯ ಪೋಷಕರ ಆರೋಪ. ವಿಷವಿಕ್ಕಿದ ಗಾಯಕಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.
ಕೆಲ ದಿನಗಳ ಹಿಂದಷ್ಟೇ ರುಕ್ಸಾನಾ ಅವರು ಒಡಿಶಾದ ಬೊಲಂಗಿರ್‌ನಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.. ಈ ವೇಳೆ ಜ್ಯೂಸೊಂದನ್ನು ಕುಡಿದಿದ್ದು, ಅದರ ನಂತರ ಆಕೆ ಅಸ್ವಸ್ಥಳಾಗಿದ್ದಳು ಎಂದು ತಿಳಿದುಬಂದಿದೆ..