CinemaNational

ಪತ್ನಿಯ ಬೆತ್ತಲೆ ವಿಡಿಯೋ ಮಾರುತ್ತಿದ್ದನಂತೆ ಮೈಸೂರಿನ ಆದಿಲ್‌..!

ಮುಂಬೈ; ನನ್ನ ಪತಿ ಆದಿಲ್‌ ಖಾನ್‌ ಅವ್ರು ನನಗೆ ಗೊತ್ತಾಗದಂತೆ ನನ್ನ ಬೆತ್ತಲೆ ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಅದನ್ನು ಮಾರಾಟ ಮಾಡುತ್ತಿದ್ದ ಎಂದು ನಟಿ ರಾಖಿ ಸಾವಂತ್‌ ಗಂಭೀರ ಆರೋಪ ಮಾಡಿದ್ದಾಳೆ. ಮೈಸೂರು ಮೂಲದ ಉದ್ಯಮಿ ಆದಿಲ್‌ ನನ್ನು ರಾಖಿ ಸಾವಂತ್‌ ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಆದಿಲ್‌ ಆಕೆಯಿಂದ ದೂರವಾಗಿದ್ದಾನೆ. ಈ ನಡುವೆ ರಾಖಿ ಸಾವಂತ್‌ ಆದಿಲ್‌ ವಿರುದ್ಧ ಕೇಸ್‌ ದಾಖಲು ಮಾಡಿದ್ದು, ಮನೆಗೆ ಬಂದಿದ್ದ ಆದಿಲ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ. ಹೀಗಿರುವಾಗಲೇ ರಾಖಿ ಸಾವಂತ್‌ ಅವರು ಆದಿಲ್‌ ವಿರುದ್ಧ ಬೆತ್ತಲೆ ವಿಡಿಯೋ ಮಾಡಿದ ಗಂಭೀರ ಆರೋಪ ಮಾಡಿದ್ದಾಳೆ.

ಆದಿಲ್‌ ಇತ್ತೀಚೆಗಷ್ಟೇ ರಾಖಿ ಸಾವಂತ್‌ ಅವರನ್ನು ಮದುವೆಯಾಗಿದ್ದರು. ಆದ್ರೆ ಕೆಲ ದಿನಗಳಿಂದ ರಾಖಿ ಸಾವಂತ್‌ರಿಂದ ಆದಿಲ್‌ ದೂರವಿದ್ದರು. ಹೀಗಾಗಿ ರಾಖಿ ಸಾವಂತ್‌ ಪೊಲೀಸರಿಗೆ ವರದಕ್ಷಿಣೆ ಕಿರುಕುಳ ಹಾಗೂ ರೇಪ್‌ ಕೇಸ್‌ ದಾಖಲು ಮಾಡಿದ್ದಾರೆ. ಹೀಗಾಗಿ ಆದಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Share Post