ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ನೀಡಿದ ಚುನಾವಣಾ ಆಯೋಗ
ಬೆಂಗಳೂರು: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಅಖಾಡಕ್ಕೆ ಸಜ್ಜಾಗುತ್ತಿವೆ. ಇದರ ನಡುವೆ ನೂತನ ಪಕ್ಷ ಪ್ರಜಾಕೀಯ ಕೂಡ ಎಂಟ್ರಿಯಾಗ್ತಿದೆ.
ನಟ ಉಪೇಂದ್ರ ಕಟ್ಟಿರುವ ಪ್ರಜಾಕೀಯ ಪಕ್ಷ ಈ ಭಾರಿಯ ವಿಧಾಮಮನ ಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಸೆಣಸಾಡಲು ಅಕಾಡಕ್ಕೆ ಇಳಿಯಲಿದೆ. ಚುನಾವಣಾ ಆಯೋಗ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿನ್ಹೆ ನೀಡಿದ್ದು ಇದನ್ನ ನಟ ಉಪೇಂದ್ರ ತಮ್ಮ ಟ್ವೀಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ನಟ ಉಪೇಂದ್ರ ವಿಭಿನ್ನವಾದ ಉದ್ದೇಶಗಳೊಂದಿಗೆ 2018 ರಲ್ಲಿ ಪ್ರಜಾಕೀಯ ಪಕ್ಷವನ್ನ ಸ್ಥಾಪಿಸಿದರು. ಇದೀಗ ಪಕ್ಷಕ್ಕೆ ಅಧಿಕೃತವಾಗಿ ಚಿನ್ಹೆ ಲಭ್ಯವಾಗಿದೆ. ಈ ಮೂಲಕ ರಾಜ್ಯದ ಚುನಾವಣೆ ಅಕಾಡಕ್ಕೆ ನೂತನ ಪ್ರಜಾಕೀಯ ಪಕ್ಷ ಎಂಟ್ರಿ ಕುತೂಹಲ ಮೂಡಿಸಿದೆ.