CinemaHealth

ಪೂನಂ ಪಾಂಡೆ ಸಾವಿನ ಸುದ್ದಿ ಸುಳ್ಳು..!; ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ನಟಿ!

ಮುಂಬೈ; ಗರ್ಭಕೋಶ ಕ್ಯಾನ್ಸರ್‌ನಿಂದ ಬಾಲಿವುಡ್‌ ನಟಿ ಹಾಗೂ ಮಾಡೆಲ್‌ ಸಾವನ್ನಪ್ಪಿದ್ದಾರೆ ಎಂದು ನಿನ್ನೆ ಸುದ್ದಿಯಾಗಿತ್ತು. ಅವರ ಕಾರ್ಯದರ್ಶಿ ಹೆಸರಲ್ಲಿ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಮಾಧ್ಯಮಗಳಲ್ಲೂ ಈ ಬಗ್ಗೆ ಸುದ್ದಿಯಾಗಿತ್ತು. ಆದ್ರೆ ಇದೀಗ ನಟಿ ಪೂನಂ ಪಾಂಡೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಮಾಡಿ ನಾನು ಸತ್ತೇ ಇಲ್ಲ ಎಂದು ಕ್ಲಾರಿಫಿಕೇಷನ್‌ ಕೊಟ್ಟಿದ್ದಾಳೆ.

ಪೂನಂ ಪಾಂಡೆ ಮ್ಯಾನೇಜರ್‌ ಅಕೌಂಟ್‌ನಿಂದ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಈ ವಿಚಾರ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಇದೀಗ ಪೂನಂ ಪಾಂಡೇ ಅವರೇ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ನಾನು ಬದುಕಿಯೇ ಇದ್ದೇನೆ. ನನ್ನ ಬಗ್ಗೆ ಬಂದಿರುವ ಸುದ್ದಿ ಸುಳ್ಳು ಎಂದು ಹೇಳಿಕೊಂಡಿದ್ದಾಳೆ.

https://www.instagram.com/reel/C24C5DCtyRU/?utm_source=ig_web_copy_link&igsh=MzRlODBiNWFlZA==

Share Post