ಮುಸ್ಲಿಮರಿಗೆ ಮೀಸಲಾತಿ ಕೊಡಲು ಯಾರಿಗೆ ಕಡಿಮೆ ಮಾಡ್ತೀರಿ..?; ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ
ಚಾಮರಾಜನಗರ; ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಟ್ಟಿತ್ತು. ಅದನ್ನು ನಾವು ತೆಗೆದಿದ್ದೇವೆ. ಈಗ ಕಾಂಗ್ರೆಸ್ ಮತ್ತೆ ವಾಪಸ್ ಕೊಡುತ್ತೇವೆ ಅಂತಿದ್ದಾರೆ. ಯಾರ ಮೀಸಲಾತಿಯನ್ನು ಕಡಿಮೆ ಮಾಡಿ ವಾಪಸ್ ಕೊಡುತ್ತೀರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲಿ ನಡೆದ ರೋಡ್ ಶೋ ವೇಳೆ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮತ್ತೆ ಮೀಸಲಾತಿ ಕೊಡ್ತೇವೆ ಅಂತಿದ್ದಾರೆ. ನೀವೇ ಹೇಳಿ ಮುಸ್ಲಿಮರಿಗೆ ಮೀಸಲಾತಿ ಕೊಡಬೇಕಾ..? ಎಂದು ಜನರನ್ನು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ. ಒಂದು ವೇಳೆ ನೀವು ಮುಸ್ಲಿಮರಿಗೆ ಮೀಸಲಾತಿ ಕೊಡುವುದಾದರೆ ಯಾರದಾದರೂ ಮೀಸಲಾತಿ ಕಡಿಮೆ ಮಾಡಬೇಕು. ಒಕ್ಕಲಿಗರದ್ದು ಕಡಿಮೆ ಮಾಡುತ್ತೀರಾ..? ಇಲ್ಲವೇ ಲಿಂಗಾಯತರದ್ದು ಕಡಿಮೆ ಮಾಡುತ್ತೀರಾ..? ತಿಳಿಸಬೇಕು ಎಂದು ಅಮಿತ್ ಶಾ ಆಗ್ರಹಿಸಿದರು.