Cinema

ಸಮನ್ವಿ ಸಾವಿಗೆ ಸೃಜನ್‌ ಲೋಕೇಶ್‌ ಭಾವುಕ

ಬೆಂಗಳೂರು : ನೆನ್ನೆ ನಡೆದ ರಸ್ತೆ ಅಪಘಾತದಲ್ಲಿ ಬಾಲ ಪ್ರತಿಭೆ ಸಮನ್ವಿ ಸಾವನ್ನಪ್ಪಿದ್ದಾರೆ. ಸಮನ್ವಿ ನೆನೆದು ನಟ ಸೃಜನ್‌ ಲೋಕೇಶ್‌ ಭಾವುಕರಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸೃಜನ್‌ ಲೋಕೇಶ್‌ ಅವರು ಸಮನ್ವಿ ಸಾವಿನ ಸುದ್ದಿ ಸಖತ್‌ ಡಿಸ್ಟರ್ಬ್‌ ಆಗಿದ್ದೇನೆ, ರಾತ್ರಿಯಿಂದ ಸರಿಯಾಗಿ ನಿದ್ದೆ ಮಾಡಲಾಗ್ತಿಲ್ಲ, ಕಣ್ಣು ಮುಚ್ಚಿದರೇ ಸಮನ್ವಿನೇ ಮುಂದೇ ಬರ್ತಾಳೆ. ಅಪ್ಪು ಅವರು ತೀರಿಕೊಂಡಾಗಲೇ ದೇವರು ಇಲ್ಲ ಎಂದು ತಿಳಿದುಕೊಂಡೆ, ಈಗ ಈ ಮಗುವಿನ ಸಾವು ನಿಜಕ್ಕೂ ಅರಗಿಸಿಕೊಳ್ಳಲಾಗುತ್ತಿಲ್ಲ.

ನಮ್ಮ ಶೂಟಿಂಗ್‌ ಸೆಟ್‌ನಲ್ಲಿ ಖುಷಿ ಖುಷಿಯಾಗಿ ಓಡಾಡಿಕೊಂಡು ಇರುತ್ತಿದ್ದಳು, ಅಂತಹ ಮಗು ಆಕ್ಸಿಡೆಂಟ್‌ ಅಲ್ಲಿ ತೀರಿಹೋಗೋದು ಎಂದರೆ ನಿಜಕ್ಕೂ ದುರಂತ, ನಾವು ಇದನ್ನೆಲ್ಲಾ ನೋಡ್ತಿದ್ದರೆ ಎಷ್ಟು ಎಚ್ಚರದಿಂದಿದ್ದರೂ ಸಾಲದು ಎನಿಸುತ್ತದೆ.

ಸಮನ್ವಿ ಅಭಿನಯ ನೋಡಿ ಮುಂದೆ ಈ ಹುಡುಗಿ ದೊಡ್ಡ ಸೂಪರ್‌ ಸ್ಟಾರ್‌ ಆಗ್ತಾಳೆ ಅಂತ ನಾವೇ ಯಾವಾಗಲೂ ಹೇಳ್ತಿದ್ವಿ. ಶೂಟಿಂಗ್‌ ನಂತರ ನನ್ನ ಜಡ್ಜ್‌ ಬಾಯ್‌ ಅಂತ ಮುದ್ದಾಗಿ ಕರೆಯೋಳು.

ಇನ್ನು ಸಮನ್ವಿ ಅವರ ತಾಯಿ ಬಗ್ಗೆ ಮಾತನಾಡಿದ ಸೃಜನ್‌, ಅಮೃತ ಸಮನ್ವಿಗಿಂತ ಮುಂಚೆ ಒಂದು ಮಗುವನ್ನು ಕಳೆದುಕೊಂಡಿದ್ದರು, ಸಮನ್ವಿಯನ್ನು ಪ್ರೀತಿಯಿಂದ ಸಾಕುತ್ತಿದ್ದರು. ಈಗ ಅವರು ಈ ದುಃಖವನ್ನು ಹೇಗೆ ತಡೆಯುತ್ತಾರೋ ಗೊತ್ತಿಲ್ಲ ಎಂದು ಸೃಜನ್‌ ಭಾವುಕರಾದರು.

Share Post