Bengaluru

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಮಣದ ಶುಭಾಶಯ ಕೋರಿದ ಸಿಎಂ

ಬೆಂಗಳೂರು:   ರೈತರ ಸುಗ್ಗಿ ಹಬ್ಬ, ದೇಶದಾದ್ಯಂತ ತುಂಬಾ ವಿಜೃಂಭಣೆಯಿಂದ ಆಚರಿಸುವ ಸಂಕ್ರಾಂತಿಯಂದು ಎಳ್ಳು, ಬೆಲ್ಲ ತಿಂದು ಒಳ್ಳೆ ಮಾತಾಡು ಎಂದು ಪರಸ್ಪರ ಶುಭಾಷಯ ತಿಳಿಸುತ್ತಾ ಊರಿಗೆ ಊರೇ ಅದ್ದೂರಿಯಾಗಿ ಆಚರಿಸುವ ಸಂಕ್ರಾಂತಿ ಹಬ್ಬಕ್ಕೆ ನಾಡಿನ ಜನತೆಗೆ ಸಿಎಂ ಸಂಕ್ರಾಂತಿ ಶುಭಾಷಯ ಕೋರಿದ್ದಾರೆ.

ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ಹೊಸ ಕನಸು, ಆಸೆ-ಆಕಾಂಕ್ಷೆಗಳು ಈಡೇರಲಿ. ಎಲ್ಲರ ಬಾಳಲ್ಲಿ ಹೊಸ ಚೈತನ್ಯ ಮೂಡಲಿ. ಸಂಕ್ರಮಣದ ಪರ್ವಕಾಲ ಎಲ್ಲರ ಬಾಳಲ್ಲಿ ಶುಭ ತರಲಿ. ಎಲ್ಲರೂ ಒಟ್ಟಾಗಿ ಕೋವಿಡ್ ವಿರುದ್ಧ ಹೋರಾಡಿ ಭಾರತ ಹಾಗೂ ಕರ್ನಾಟಕವನ್ನು ಕೋವಿಡ್ ಮುಕ್ತ ಮಾಡೋಣ ಎಂದು ಸಮಸ್ತ ಕರ್ನಾಟಕದ ಜನತೆಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಶುಭ ಕೋರಿದ್ದಾರೆ.

Share Post