Cinema

ಅಪ್ಪು ಬಗ್ಗೆ ಸಾಹಸ ನಿರ್ದೇಶಕನ ಮಾತು: ರವಿ ವರ್ಮಾ ಬಿಚ್ಚಿಟ್ಟ ಟಾಲಿವುಡ್‌ ಸ್ಟಾರ್ಸ್‌ ಮನದಾಳದ ಮಾತು

ಬೆಂಗಳೂರು:  ಅಪ್ಪು ಕನ್ನಡ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರಲ್ಲೂ ಅಚ್ಚಳಿಯದಂತೆ ಉಳಿದುಹೋಗುವ ಹೆಸರು ಪುನೀತ್‌ ರಾಜ್‌ಕುಮಾರ್.‌ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದಾದ್ಯಂತ ಅವರ ಹೆಸರು ಚಿರಸ್ಮರಣೀಯವಾಗಿದೆ. ಅಪ್ಪು ಅಗಲಿ ನಾಲ್ಕು ತಿಂಗಳಾದ್ರೂ ಅದನ್ನು ನಂಬುವ ಶಕ್ತಿ ಮಾತ್ರ ಅಭಿಮಾನಿಗಳಿಗೆ ದೇವರು ನೀಡಿಲ್ಲ. ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್‌ ಇದೇ ತಿಂಗಳ 17ರಂದು ತೆರೆ ಕಾಣಲಿದೆ. ಜೇಮ್ಸ್‌ ಸಿನಿಮಾ ಬಗ್ಗೆ ಇಡೀ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳು ಕಾತರದಿಂದ ಕಾಯ್ತಿದಾರೆ. ಜೇಮ್ಸ್‌ ಪ್ರಿ ರಿಲೀಸ್‌ ಈವೆಂಟ್‌ನಲ್ಲಿ ಕೂಡ ಇತರೆ ಕಲಾವಿದರು ಅಪ್ಪು ಅವರನ್ನು ಸ್ಮರಿಸಿ ಭಾವುಕರಾದ್ರು.

ಈ ವೇಳೆ ಸಾಹಸ ನಿರ್ದೇಶಕ ರವಿ ವರ್ಮಾ ಮಾತನಾಡಿ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ್ರು. ಈ ವೇಳೆ ಟಾಲಿವುಡ್‌ ಫೇಮಸ್‌ ಸ್ಟಾರ್ಸ್‌ ಅಪ್ಪು ಬಗ್ಗೆ ಹೇಳಿದ್ದ ಮಾತುಗಳನ್ನು ಈ ವೇಳೆ ತಿಳಿಸಿದ್ರು. ನನ್ನ ಅಪ್ಪು ಸರ್‌ ಬಾಂಧವ್ಯ ಇಂದು ನಿನ್ನೆಯದಲ್ಲ. ಅವರೊಂದಿಗೆ ನಾನು 13ಸಿನಿಮಾಗಳನ್ನು ಮಾಡಿದ್ದೇನೆ. ವಂಶಿ ಸಿನಿಮಾದಿಂದ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ಯಾವುದೇ ರೀತಿಯ ಸ್ಟಂಟ್‌ ಹೇಳಿದ್ರು ಇಲ್ಲಾ ಎನ್ನದೆ ಮಾಡ್ತಿದ್ರು. ಈ ಬಗ್ಗೆ ಟಾಲಿವುಡ್‌ ನಟರು ಅಲ್ಲು ಅರ್ಜುನ್‌ ಹಾಗೂ ಜ್ಯೂ.ಎನ್‌ಟಿಆರ್‌ ಅವರು ನಾನು ಕನ್ನಡದಿಂದ ಬಂದವನು ಎಂದು ತಿಳಿದು, ನೀವು ಅಪ್ಪು ಸರ್‌ಗೆ ಕಂಪೋಸ್‌ ಮಾಡುವ ಸ್ಟಂಟ್ಸ್‌ ಹಾಘೆ ನಮಗೆ ಮಾಡಬೇಡಿ ಎಂದು ಮೊದಲೇ ಹೇಳ್ತಿದ್ರಂತೆ. ನೋಡಿಕೊಂಡು ಸ್ಟಂಟ್ಸ್‌ ಮಾಡಿಸಿ ಎಂದು ಹೇಳ್ತಿದ್ರು ಎಂದು ಸಾಹಸ ನಿರ್ದೇಶಕ ರವಿ ವರ್ಮಾ ಅವರು ಅಪ್ಪು ಸರ್‌ ಅವರ ಸಾಹಸದ ಬಗ್ಗೆ ಮನಬಿಚ್ಚಿ ಮಾತನಾಡಿದ್ರು.

ಇಂದು ಅವರಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ನನ್ನ ಅವರ ಕೊನೆಯ ಚಿತ್ರ ಇದು ಎಂಬುದನ್ನು ನಂಬಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

Share Post