ಐಸೋಲೇಟ್ ಆದ ಗಾಯಕ ಸೋನು ನಿಗಮ್ ಕುಟುಂಬ
ದುಬೈ: ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಕೊರೊನಾ ಸೋಂಕು ಗತುಲಿರಿವುದಾಗಿ ಖ್ಯಾತ ಗಾಯಕ ಸೋನು ನಿಗಮ್ ಸ್ಪಷ್ಟಪಡಿಸಿದ್ದಾರೆ. ಸದ್ಯ ದುಬೈನಲ್ಲಿರುವ ಸೋನು ನಿಗಮ್ ಫ್ಯಾಮಿಲಿ ಭಾರತಕ್ಕೆ ಬರಬೇಕಿತ್ತು. ಬರುವ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ ಈ ವೇಳೆ ಕೊರೊನಾ ಇರುವುದ ದೃಢವಾಗಿದೆ. ಮಾರ್ನಾಲ್ಕು ಬಾರಿ ಟೆಸ್ಟ್ ಮಾಡಿಸಿದ್ರೂ ಮೈಲ್ಡ್ ಸಿಂಪ್ಟಮ್ಸ್ ಇರುವ ಕಾರಣ ಎಲ್ಲರೂ ದುಬೈನಲ್ಲೇ ಪ್ರತ್ಯೇಕವಾಗಿ ಐಸೋಲೇಟ್ ಆಗಿರುವುದಾಗಿ ಸೋನು ನಿಗಮ್ ತಿಳಿಸಿದ್ದಾರೆ.
ಹೊಸ ವರ್ಷದ ಶುಭಾಷಯ ತಿಳಿಸುತ್ತಾ.. ಸೂಪರ್ ಸಿಂಗರ್-೩ ಆಡೀಷನ್ ಸಲುವಾಗಿ ಭುವನೇಶ್ವರಕ್ಕೆ ಬರಬೇಕಿತ್ತು. ದುರದೃಷ್ಟವಶಾತ್ ಅದು ಸಾಧ್ಯವಾಗಿಲ್ಲ. ನಾನು ನನ್ನ ಪತ್ನಿ ಮಧುರಿಮಾ, ಮಗ ಕೂಡ ಇಲ್ಲಿಯೇ ಲಾಕ್ ಆಗುವ ಪರಿಸ್ಥಿತಿ ಬಂದಿದೆ ಎಂದು ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕೋವಿಡ್ ಮೂರನೇ ಅಲೆ ಹೊಸ ತಳಿಗಳ ರೂಪಂತರದಲ್ಲಿ ವೇಗವಾಗಿ ಹರಡುತ್ತಿದೆ. ಜನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಒಳ್ಳೆಯ ದಿನಗಳ ಬರಲಿವೆ ಅದಕ್ಕಾಗಿ ಸಿದ್ದರಾಗಿ ಇಂದು ಕಷ್ಟವಾದರೂ ಪರವಾಗಿಲ್ಲ ಕಾಯುವ ತಾಳ್ಮೆ ಇರಲಿ ಎಂದು ತಿಳಿಸಿದ್ದಾರೆ.