Sports

RCB ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಸೋಂಕು

ಸಿಡ್ನಿ : RCB ತಂಡದ ಹೊಡಿ ಬಡಿ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಪಾಲ್ಗೊಂಡಿರುವ ಮ್ಯಾಕ್ಸಿಗೆ ಸೋಂಕು ತಗುಲಿರುವುದನ್ನು ಮೆಲ್ಬರ್ನ್‌ ಸ್ಟಾರ್ಸ್‌ ತಂಡ ತಮ್ಮ ಸಾಮಾಜಿಕ ತಾಣದ ಮೂಲಕ ತಿಳಿಸಿದೆ.

ಮೆಲ್ಬರ್ನ್‌ ಸ್ಟಾರ್ಸ್‌ ತಂಡದ ಪರ ಬ್ಯಾಟ್‌ ಬೀಸುವ ಮ್ಯಾಕ್ಸಿ ಅವರಿಗೆ ನೆನ್ನೆ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಿದ ವೇಳೆ ಪಾಸಿಟಿವ್ ವರದಿಯಾಗಿದ್ದು, ಇದೀಗ ಆರ್​ಟಿಪಿಸಿಆರ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಮೆಲ್ಬರ್ನ್ ಸ್ಟಾರ್ಸ್ ತಂಡ ಸ್ಪಷ್ಟಪಡಿಸಿದೆ.

ಸದ್ಯ ಹೋಟೆಲ್‌ನಲ್ಲಿಯೇ ಕ್ವಾರಂಟೈನ್‌ ಆಗಿರುವ ಮ್ಯಾಕ್ಸ್‌ವೆಲ್‌ ಅವರು RTPCR ರಿಸಲ್ಟ್‌ಗಾಗಿ ಕಾದಿದ್ದಾರೆ. ಒಂದು ವೇಳೆ ಅಲ್ಲಿಯೂ ಪಾಸಿಟಿವ್‌ ವರದಿ ಆದರೆ ಅವರು ಟೂರ್ನಿಯಿಂದ ಹೊರಗುಳಿಯಬೇಕಾದೀತು. ಬಿಗ್‌ ಬ್ಯಾಶ್‌ನಲ್ಲಿ ಪಾಲ್ಗೊಂಡಿರುವ ಒಟ್ಟು 13 ಆಟಗಾರರಲ್ಲಿ ಈಗಾಗಲೇ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೊನೆ ಕ್ಷಣದಲ್ಲಿ ಪಂದ್ಯಗಳು ರದ್ದಾಗಿವೆ. ಹೀಗೆ ಮುಂದುವರಿದರೆ ಟೂರ್ನಿ ರದ್ದಾದರೂ ಅಚ್ಚರಿ ಪಡಬೇಕಿಲ್ಲ.

Share Post