BengaluruCinema

ಕೆಜಿಎಫ್-‌2 ಚಿತ್ರದ ಟ್ರೇಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿವಣ್ಣ: ಚಿತ್ರತಂಡ ಪ್ರಕಟ

ಬೆಂಗಳೂರು: ಯಶ್‌ ಅಭಿನಯದ  KGF-2 ಸಿನಿಮಾ ಕೂಡಾ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಲನಚಿತ್ರಗಳಲ್ಲಿ ಒಂದಾಗಿದೆ.  ನಿರ್ದೇಶಕ ಪ್ರಶಾಂತ್ ನೀಲ್ ಸಹ ಈ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಲಿದ್ದಾರೆ. ಯಶ್ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರು KGF-2 ಗಾಗಿ ಕಾಯುತ್ತಿದ್ದಾರೆ. ‘ಕೆಜಿಎಫ್ 2’ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಇದೀಗ ಈ ಚಿತ್ರದ ಟ್ರೈಲರ್‌ ಲಾಂಚ್‌ನಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಭಾಗಿಯಾಗಲಿದ್ದಾರೆ.

ಯಶ್‌ ಹಾಗೂ ಶಿವಣ್ಣ, ಅಪ್ಪು, ನಡುವಿನ ಸಂಬಂಧ ಅತ್ಯಂತ ಹತ್ತಿರವಾದದ್ದು ಹಾಗೂ ಆತ್ಮೀಯತೆಯಿಂದ ಕೂಡಿದೆ. ಹಾಗಾಗಿ ಏಪ್ರಿಲ್ 14 ರಂದು ಚಿತ್ರದ ಬಿಡುಗಡೆಗೆ ಮುನ್ನ ನಿರ್ಮಾಪಕರು ಈಗಾಗಲೇ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ತುಫಾನ್ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.. ಚಿತ್ರದ ಟ್ರೈಲರ್ ಮಾರ್ಚ್ 27 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡದ ಸ್ಟಾರ್ ಹೀರೋ ಶಿವರಾಜ್ ಕುಮಾರ್ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಈ ವಿಚಾರವನ್ನು ಚಿತ್ರತಂಡ ಹೊಸ ಪೋಸ್ಟರ್ ಮೂಲಕ ಬಹಿರಂಗಪಡಿಸಿದೆ.ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಕರಣ್ ಜೋಹರ್ ಹೋಸ್ಟ್ ಆಗಲಿದ್ದಾರೆ ಎಂದು ಚಿತ್ರತಂಡ ಪ್ರಕಟಿಸಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಯಶ್ ಜೋಡಿಯಾಗಿ ನಟಿಸಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

Share Post