ಚರ್ಚೆಗೆ ಅವಕಾಶ ನೀಡದಿದ್ದಕ್ಕೆ ಬೇಸರಗೊಂಡು ಸುಮ್ಮನೆ ಕುಳಿತ ಡಿಕೆಶಿ: ಕಲಾಪ ಮುಂದೂಡಿದ ಸ್ಪೀಕರ್
ವಿಧಾನಸಭೆ: ಬೇಡಿಕೆ ಮೇಲಿನ ಚರ್ಚೆ ಸಮಯ ಮುಕ್ತಾಯವಾಗಿದೆ ಎಂದು ಸ್ಪೀಕರ್ ಕಾಗೇರಿ ಹೇಳುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದನದಲ್ಲಿ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಸಮಯ ಮುಗಿದಿದೆ ಎಂದು ಸ್ಪೀಕರ್ ಮಾತಿಗೆ ಡಿಕೆಶಿ ಬೇಸರವಾಗಿ ನಾನು ವಿಧಾಸನಭೆಗೆ ಬರುತ್ತಿಲ್ಲವೆಂದು ಈಗಾಗಲೇ ಎಲ್ಲರೂ ಹೇಳುತ್ತಿದ್ದಾರೆ ಇಂತಹ ಸಮಯದಲ್ಲಿ ನೀವು ನನ್ನ ಮೇಲೆ ಕರುಣೆ ತೋರುವುದಿಲ್ಲವಲ್ಲಾ..? ಎಂದು ಡಿಕೆಶಿ ಸ್ಪೀಕರ್‌ಗೆ ಪ್ರಶ್ನೆ ಮಾಡಿದ್ದಾರೆ.
ನೀವು ರಾಜ್ಯ ಸುತ್ತುತ್ತಿರುವುದು ಪ್ರತಿದಿನ ಪತ್ರಿಕೆಗಳಲ್ಲಿ ಬರುತ್ತಿದೆ. ಹೊಸದಾಗಿ ನಾನು ಹೇಳುವುದು ಏನೂ ಇಲ್ಲ. ಹೋಗಲಿ ಹದಿನೈದು ನಿಮಿಷ ಸಮಯ ನೀಡುತ್ತೇನೆ ಮಾತನಾಡಿ ಎಂದು ಸ್ಪೀಕರ್ ಹೇಳಿದ್ದಾರೆ. ನೀವು ನೀಡುವ ಹದಿನೈದು ನಿಮಿಷದಲ್ಲಿ ಏನು ಮಾತನಾಡಲಿ..ಹೇಗೆ ಮಾತನಾಡಲಿ ಎಂದು ಬೇಸರಗೊಂಡು ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು. ತದನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸದನದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ರು.