Cinema

ಜೇಮ್ಸ್‌ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ಅಭಿನಯಿಸಲಿದ್ದಾರೆ !

ಬೆಂಗಳೂರು : ಪುನೀತ್‌ ರಾಜ್‌ ಕುಮಾರ್‌ ಅವರು ನಮ್ಮನ್ನು ಅಗಲಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಕಿಂಚಿತ್ತೂ ಕಮ್ಮಿ ಆಗಿಲ್ಲ. ಇನ್ನು ಅಪ್ಪು ಅವರು ಅಭಿನಯಿಸಿರುವ ಕೊನೆಯ ಸಿನಿಮಾ ಜೇಮ್ಸ್‌ ತಂಡದಿಂದ ಒಂದು ಗುಡ್‌ ನ್ಯೂಸ್‌ ಹೊರ ಬಿದ್ದಿದೆ.

ಅಣ್ಣಾವ್ರ ಕಾಲದಿಂದಲೂ ಆ ಒಂದು ಮಾತು ಚಾಲ್ತಿಯಲ್ಲಿತ್ತು. ಅಣ್ಣಾವ್ರ ಕುಟುಂಬ ಒಟ್ಟಾಗಿ ಒಂದು ಸಿನಿಮಾ ಮಾಡಬೇಕು ಅಂತ. ಅಣ್ಣಾವ್ರು ಕಾಲವಾದ ಮೇಲೆ ಅಣ್ಣಾವ್ರ ಮಕ್ಕಳು ಒಟ್ಟಾಗಿ ಸೇರಿ ಒಂದು ಸಿನಿಮಾ ಮಾಡಬೇಕು ಎಂದು.

ಅಪ್ಪು ಅವರ ಜೇಮ್ಸ್‌ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಘವೇಂದ್ರ ರಾಜ್ಕುಮಾರ್‌ ಬಣ್ಣ ಹಚ್ಚಲಿದ್ದಾರೆ ಎಂಬುದು ಕನ್ಫರ್ಮ್‌ ಆಗಿದೆ. ಇದರಿಂದ ಅಭಿಮಾನಿಗಳ ಕನಸು ಈಡೇರಲಿದೆ. ಅಪ್ಪು ಅವರು ಇಲ್ಲ ಎನ್ನುವ ದುಃಖ ಇದ್ದರೂ ಕೂಡ ಅಭಿಮಾನಿಗಳು ಅದನ್ನು ಈ ಸಿನಿಮಾ ನೋಡಿ ಮರೆಯಲಿದ್ದಾರೆ ಎನ್ನಲಾಗ್ತಿದೆ.

ಶಿವಣ್ಣ ಮತ್ತು ರಾಘಣ್ಣ ಸಿನಿಮಾದಲ್ಲಿ ಯಾವ ಪಾತ್ರ ಮಾಡಲಿದ್ದಾರೆ, ಅಥವಾ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರ ಎಂಬುದರ ಯಾವ ಮಾಹಿತಿಯು ಇನ್ನು ಹೊರಬಂದಿಲ್ಲ ಆದರೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದಂತು ನಿಶ್ಚಿತ.

ಇದೇ ಮಾರ್ಚ್ ಅಲ್ಲಿ ಪುನೀತ್‌ ಅವರ ಹುಟ್ಟಿದ ಹಬ್ಬ ಇದ್ದು, ಸಿನಿಮಾವನ್ನು ಆ ದಿನ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಆದರೆ ಕೊರೊನಾ ಸಮಯದಲ್ಲಿ ಯಾವುದನ್ನೂ ನಿರ್ದಿಷ್ಟವಾಗಿ ಹೇಳಲು ಆಗುತ್ತಿಲ್ಲ.

 

Share Post