BengaluruCinemaHealth

ಲೀಲಾವತಿಯವರನ್ನು ನೋಡಿ ತಾಯಿ ನೆನಪಾದರು; ಶಿವಣ್ಣ ಭಾವುಕ

ಬೆಂಗಳೂರು; ಲೀಲಾವತಿಯವರನ್ನು ನೋಡಿ ನನ್ನ ತಾಯಿ ನೆನಪಾದರು ಎಂದು ನಟ ಶಿವರಾಜ್‌ಕುಮಾರ್‌ ಭಾವುಕರಾಗಿದ್ದಾರೆ. ಹಿರಿಯ ನಟಿ ಲೀಲಾವತಿಯವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸಲು ಶಿವರಾಜ್‌ಕುಮಾರ್‌ ಹಾಗೂ ಗೀತಾಶಿವರಾಜ್‌ ಕುಮಾರ್‌ ಆಗಮಿಸಿದ್ದರು. ಈ ವೇಳೆ ಶಿವರಾಜ್‌ಕುಮಾರ್‌ ಅವರು ಭಾವುಕರಾಗಿ ಮಾತನಾಡಿದ್ದಾರೆ.

ಈ ವಯಸ್ಸಿನಲ್ಲೂ ತಾಳುವಂತಹ ಶಕ್ತಿ ಅವರಿಗೆ ಇದೆ. ನನ್ನ ವಾಯ್ಸ್‌ ಅವರು ಕಂಡುಹಿಡಿದರು. ಅವರನ್ನು ನೋಡಿದರೆ ನನ್ನ ತಾಯಿ ನೆನಪಾಗುತ್ತಾರೆ ಎನ್ನುತ್ತಾ ವಿನೋದ್‌ ರಾಜ್‌ ಕೈಹಿಡಿದು ತಬ್ಬಿಕೊಂಡ ಧೈರ್ಯವಾಗಿರಿ ಎಂದು ಹೇಳಿ ಶಿವಣ್ಣ ಹೇಳಿದ್ದಾರೆ.

 

Share Post