ಜೇಮ್ಸ್ ಚಿತ್ರದ ಅಪ್ಪು ಪಾತ್ರಕ್ಕೆ ಶಿವಣ್ಣ ಕಂಠದಾನ
ಬೆಂಗಳೂರು : ಮಾರ್ಚ್ 17ಕ್ಕೆ ಪುನೀತ್ ಅವರ ಹುಟ್ಟು ಹಬ್ಬಕ್ಕೆ ಜೇಮ್ಸ್ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಇದರಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಭರದಿಂದ ನಡೆಸಿದೆ. ಶಿವಣ್ಣ ಅಪ್ಪು ಅವರಿಗೆ ಧ್ವನಿ ಆಗಲಿದ್ದಾರೆ ಎಂದು ಹೇಳಿದ್ದರು. ಈಗ ಶಿವಣ್ಣ ಪುನೀತ್ ಅವರ ಪಾತ್ರಕ್ಕೆ ಕಂಠದಾನ ಮಾಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.
ಎರಡೂವರೆ ದಿನಗಳ ಕಾಲ ಡಬ್ಬಿಂಗ್‌ಬಲ್ಲಿ ಭಾಗವಹಿಸಿದ ಶಿವಣ್ಣ, ಪುನೀತ್ ಅವರ ಸಂಪೂರ್ಣ ಡಬ್ಬಿಂಗ್ ಅನ್ನು ಮುಗಿಸಿಕೊಟ್ಟಿದ್ದಾರೆ. ಈಗಾಗಲೇ ಶಿವಣ್ಣ ಡಬ್ಬಿಂಗ್‌ಗೆ ಬಂದಿರುವ ಫೋಟೋಗಳು ವೈರಲ್ ಆಗಿದೆ.
ಡಬ್ಬಿಂಗ್ ಕುರಿತು ಮಾತನಾಡಿದ ಶಿವಣ್ಣ, ಮತ್ತೊಬ್ಬ ಕಲಾವಿದರಿಗೆ ಕಂಠದಾನ ಮಾಡುವುದು ಬಹಳ ಸವಾಲಿನ ಕೆಲಸ ಎಂದು ನುಡಿದಿದ್ದಾರೆ. ಅಪ್ಪುಗೆ ವಾಯ್ಸ್ ನೀಡೋದು ಕಷ್ಟ ಆದರೂ ಪ್ರಯತ್ನ ಮಾಡಿದ್ದೇನೆ. ಜನ ಇಷ್ಟ ಪಡ್ತಾರೆ ಅಂತ ಭಾವಿಸಿದ್ದೀನಿ ಎಂದು ಹೇಳಿಕೊಂಡಿದ್ದಾರೆ.