International

ತೈಲ ಖರೀದಿ : ಶ್ರೀಲಂಕಾಗೆ ಭಾರತದಿಂದ 3 ಸಾವಿರ ಕೋಟಿ ಸಾಲ

ಕೊಲೊಂಬೊ : ಶ್ರೀಲಂಕಾಗೆ ತಾತ್ಕಲಿಕವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಭಾರತ ನೆರವು ನೀಡಿದೆ. ತುರ್ತು ತೈಲ ಖರೀದಿಗೆ ಭಾರತ 500 ಮಿಲಿಯನ್‌ ಡಾಲರ್‌ ಸಾಲ ನೀಡಿದೆ (ಸುಮಾರು ಮೂರು ಸಾವಿರ ಕೋಟಿ).

ಶ್ರೀಲಂಕಾದಲ್ಲಿ ಸದ್ಯ ಆರ್ಥಿಕ ಕುಸಿತ ಕಂಡುಬಂದಿದೆ. ಇಂಧನ ಖರೀದಿಸಲು ಭಾರತ ಸಹಾಯ ಮಾಡಿದೆ. ಶ್ರೀಲಂಕಾದಲ್ಲಿ ವಿದ್ಯುತ್‌ ಕಡಿತ, ಬೃಹತ್‌ ಕಲ್ಲಿದ್ದಲು ಸ್ಥಾವರ ಸ್ಥಗಿತಗೊಂಡಿರುವ ಕಾರಣ ಅಲ್ಲಿನ ಜನರು ಸೀಮೆಎಣ್ಣೆ ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವ ಶ್ರೀಲಂಕಾ ಭಾರತದ ನೆರವು ಪಡೆದುಕೊಂಡಿದೆ.

ಶ್ರೀಲಂಕಾದ ಅತಿ ಹೆಚ್ಚು ಲಾಭ ತರುವ ವಲಯವೆಂದರೆ ಪ್ರವಾಸೋದ್ಯಮ. ಆದರೆ ಕೋವಿಡ್‌ ಕಾರಣದಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಉಂಟಾಗಿದೆ. ಇದರಿಂದ ದೇಶವು ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಶ್ರೀಲಾಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ನಡುವೆ ಮಾತುಕತೆ ನಡೆದಿದ್ದು ನಿನ್ನೆ ಬುಧವಾರ ಸಾಲ ನೀಡಲು ನಿರ್ಣಯಿಸಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿದೆ

Share Post