Cinema

ಎಸ್‌ಆರ್‌ಕೆ+ OTT ಶೀಘ್ರದಲ್ಲೇ ಲೋಕಾರ್ಪಣೆ; ನಟ ಶಾರುಖ್‌ ಘೋಷಣೆ

ಮುಂಬೈ; ಬಾಲಿವುಡ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ಶೀಘ್ರದಲ್ಲೇ ಎಸ್‌ಆರ್‌ಕೆ+ ಒಟಿಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಶೀಘ್ರವೇ ಎಸ್‌ಆರ್‌ಕೆ+ ಬರಲಿದೆ ಎಂದು ಒಟಿಟಿಯ ಲೋಗೊ ಇರುವ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ’ಪಠಾಣ್‌’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಬ್ಯುಸಿ ಮಧ್ಯೆಯೇ ಅವರು ಹೊಸ ಒಟಿಟಿ ವೇದಿಕೆ ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ.

Share Post