Bengaluru

ಹಿಜಾಬ್‌ ವಿವಾದದ ಬಗ್ಗೆ ಹೈಕೋರ್ಟ್‌ ತೀರ್ಪು; ಪರೀಕ್ಷೆ ಧಿಕ್ಕರಿಸಿದ ಕೆಲ ವಿದ್ಯಾರ್ಥಿನಿಯರು

‌ಬೆಂಗಳೂರು: ಹಿಜಾಬ್‌ ವಿಚಾರವಾಗಿ ಹೈಕೋರ್ಟ್‌ ತೀರ್ಪು ನೀಡುತ್ತಿದ್ದಂತೆ ಕೆಲ ವಿದ್ಯಾರ್ಥಿನಿಯರು ಪರೀಕ್ಷೆಯನ್ನೇ ತಿರಸ್ಕರಿಸಿ ಮನೆಯತ್ತ ನಡೆದಿದ್ದಾರೆ. 35 ಕಾಲೇಜು ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆಯದೆ ಮನೆಗ ಹೋಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. 

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದ ಕಾರಣ ಮನೆಯತ್ತ ಹೊರಟರು. ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ ಕಾಲೇಜಿಗೆ ಕಾಲಿಡುತ್ತೇವೆ. ಇಲ್ಲವೆಂದರ ಕಾಲೇಜಿನತ್ತ ಬರುವುದಿಲ್ಲ ಎಂದು ಅವರು ಹೇಳಿದ್ದಾರೆಂದು ತಿಳಿದುಬಂದಿದೆ.

ಹಿಜಾಬ್ ವಿವಾದ ಸ್ಪೋಟಗೊಂಡ ಉಡುಪಿಯಲ್ಲಿ ಕೂಡ ಇಸ್ಲಾಂ ವಿದ್ಯಾರ್ಥಿನಿಯರು ಇದೇ ರೀತಿಯ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶಕ್ಕೆ ತಲೆ ಬಾಗಬೇಕು. ಹಾಗೆಯೇ ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಬೇಕು. ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದ್ದಾರೆ.

Share Post