BengaluruCinemaCrime

ರಾಕ್‌ಲೈನ್‌ ಸಹೋದರ ಮನೆಯಲ್ಲಿ ಕಳ್ಳತನ; ಸಿಕ್ಕಿಬಿದ್ದ ನೇಪಾಳಿ ಗ್ಯಾಂಗ್‌!

ಬೆಂಗಳೂರು; ಚಿತ್ರ ನಿರ್ಮಾಪಕ ಹಾಗೂ ನಟ ರಾಕ್‌ಲೈನ್‌ ವೆಂಕಟೇಶ್‌ ಅವರ ಸಹೋದರನ ಮನೆಯಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೇಪಾಳಿ ಗ್ಯಾಂಗ್‌ ಇದಾಗಿದ್ದು, ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ, ಅವರಿಂದ ಮೂರು ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕಳೆದ ತಿಂಗಳು ರಾಕ್‌ಲೈನ್‌ ವೆಂಕಟೇಶ್‌ ಅವರ ಸಹೋದರ ಭ್ರಮರೇಶ್‌ ಅವರು ಕುಟುಂಬ ಸಮೇತ ಯೂರೋಪ್‌ ಪ್ರವಾಸಕ್ಕೆ ತೆರಳಿದ್ದರು. ಇದನ್ನೇ ಕಾಯುತ್ತಿದ್ದ ನೇಪಾಳಿ ಗ್ಯಾಂಗ್‌, ಮನೆಯ ಬಾಗಿಲು ಮುರಿದು ಒಳ್ಳನುಗ್ಗಿತ್ತು. ಮನೆಯಲ್ಲಿದ್ದ ಐದು ಕೆಜಿಯಷ್ಟು ಚಿನ್ನವನ್ನು ಕದ್ದು ಪರಾರಿಯಾಗಿತ್ತು. ಅಕ್ಟೋಬರ್‌ 30ರಂದು ಭ್ರಮರೇಶ್‌ ಕುಟುಂಬ ವಿದೇಶಿ ಪ್ರವಾಸದಿಂದ ವಾಪಸ್ಸಾಗಿದ್ದು, ಈ ವೇಳೆ ಕಳ್ಳತನವಾಗಿರುವುದು ಗೊತ್ತಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಮೂರು ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಉಳಿದ ಎರಡು ಕೆಜಿ ಚಿನ್ನವನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಭ್ರಮರೇಶ್‌ ಮನೆಯಲ್ಲಿ ಭಾರಿ ಪ್ರಮಾಣದ ಚಿನ್ನ ಇದೆ ಎಂದು ತಿಳಿದಿದ್ದ ಕಳ್ಳರು, ಮೂರು ತಿಂಗಳಿಂದ ಆ ಮನೆಯಲ್ಲಿ ಕಳ್ಳತನಕ್ಕೆ ಸ್ಕೆಚ್‌ ಹಾಕಿತ್ತು ಎಂದು ತಿಳಿದುಬಂದಿದೆ. ಭ್ರಮರೇಶ್‌ ಅವರ ನಿವಾಸದ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡ ಇದೆ. ಅದರಲ್ಲಿ ಕುಳಿತು, ಭ್ರಮರೇಶ್‌ ಮನೆಯ ಕಳ್ಳತನಕ್ಕೆ ಸ್ಕೆಚ್‌ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 

Share Post