ಲಿಫ್ಟ್‌ನಲ್ಲಿ ತರಬೇತಿ ವೈದ್ಯೆಗೆ ಕಿಸ್; ಹಿಮ್ಸ್ ಸಹಾಯಕ ಪ್ರಾಧ್ಯಾಪಕ ಅಮಾನತು
ಹಾಸನ : ತರಬೇತಿ ಪಡೆಯುತ್ತಿರುವ ವೈದ್ಯೆಗೆ ಲಿಫ್ಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರೊಬ್ಬರು ಕಿಸ್ ಮಾಡಿರುವ ಆರೋಪ ಕೇಳಿಬಂದಿದೆ. ಹಾಸನದ ಹಿಮ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಹಿಮ್ಸ್ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ವೈದ್ಯ ಪದವಿ ಮುಗಿಸಿ ಸಂತ್ರಸ್ತೆ ತರಬೇತಿಯಲ್ಲಿದ್ದಾರೆ. ಈಕೆ ಲಿಫ್ಟ್‌ನಲ್ಲಿ ಹೋಗುವಾಗಿ ಸಹಾಯಕ ಪ್ರಾಧ್ಯಾಪಕ ಲೋಕೇಶ್ ಎಂಬುವವರು ಬಲವಂತವಾಗಿ ಕಿಸ್ ಮಾಡಿದ್ದಾರಂತೆ. ಜೊತೆಗೆ ಲೈಂಗಿಕ ಕಿರುಕುಳ ಕೂಡಾ ನೀಡಿದ್ದಾರಂತೆ. ಇದ್ರಿಂದ ಬೇಸತ್ತ ಸಂತ್ರಸ್ತೆ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾಳೆ.
ಈ ಬಗ್ಗೆ ತರಬೇತಿ ನಿರತ ವೈದ್ಯೆ ನೀಡಿದ ದೂರಿದ ಆಧಾರದ ಮೇಲೆ ಆರೋಪಿ ಲೋಕೇಶ್‌ರನ್ನು ಅಮಾನತು ಮಾಡಲಾಗಿದೆ.