CinemaNational

ನಟಿಯ ಕಾಲು ಹಿಡಿದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ

ಹೈದರಾಬಾದ್‌; ರಾಮ್‌ ಗೋಪಾಲ್‌ ವರ್ಮಾ ಸದಾ ಒಂದಿಲ್ಲೊಂದು ವಿವಾದದಲ್ಲಿರುತ್ತಾರೆ. ಜೊತೆಗೆ ವಿಚಿತ್ರವಾದ ವರ್ತನೆ ತೋರುತ್ತಿರುತ್ತಾರೆ. ಇದೀಗ ಇಂತದ್ದೇ ಒಂದು ವಿಚಿತ್ರ ನಡವಳಿಕೆ ತೋರಿ ವರ್ಮಾ ಸುದ್ದಿಯಾಗಿದ್ದಾರೆ. ವರ್ಮಾ ಡೇಂಜರಸ್‌ ಎಂಬ ಸಿನಿಮಾ ಮಾಡಿದ್ದಾರೆ. ಅದರ ಪ್ರಚಾರಕ್ಕಾಗಿ ನಡೆದ ಸಂದರ್ಶನವೊಂದರಲ್ಲಿ ಆರ್‌ಜಿವಿ ಮತ್ತು ನಟಿ ಅಶು ರೆಡ್ಡಿ ಭಾಗವಹಿಸಿದ್ದರು. ಈ ವೇಳೆ ರಾಮ್‌ ಗೋಪಾಲ್‌ ವರ್ಮಾ ಅವರು, ಆಶು ರೆಡ್ಡಿ ಕಾಲ ಬಳಿ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ.

ಈ ಫೋಟೋ ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗಿವೆ. ಜನರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

Share Post