ಗಣಿಧಣಿ ಜನಾರ್ದನರೆಡ್ಡಿಗೆ ಬಿಗ್ ರಿಲೀಫ್; ನಾಲ್ಕು ಕೇಸ್ ರದ್ದು
ಬೆಂಗಳೂರು; ಗಣಿಧಣಿ ಹಾಗೂ ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ಧದ ಬೇನಾಮಿ ಆಸ್ತಿಗೆ ಸಂಬಂಧಿಸಿದ ನಾಲ್ಕು ಕೇಸ್‌ಗಳನ್ನು ಕೋರ್ಟ್ ರದ್ದು ಮಾಡಿದೆ. ಸಿಸಿಹೆಚ್ ೪೭ನೇ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದು, ಜನಾರ್ದನರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಐಟಿ ಅಧಿಕಾರಿಗಳು ಈ ಕೇಸ್‌ಗಳನ್ನು ದಾಖಲು ಮಾಡಿದ್ದರು. ೨೦೧೬ರ ಬೇನಾಮಿ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು. ಆದ್ರೆ ಹಿಂದಿನ ಸುಪ್ರೀಂ ಕೋರ್ಟ್ ಸೈಟೇಷನ್ ಆಧಾರದಲ್ಲಿ ಮೇಲೆ ನ್ಯಾಯಾಧೀಶರು, ರೆಡ್ಡಿ ವಿರುದ್ಧದ ನಾಲ್ಕು ಪ್ರಕರಣಗಳನ್ನು ರದ್ದು ಮಾಡಿದ್ದಾರೆ.
ಜನಾರ್ದನರೆಡ್ಡಿ ಹೊಸ ಪಕ್ಷ ಕಟ್ಟೋದಕ್ಕೆ ಸಿದ್ಧತೆ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲೇ ಅವರ ವಿರುದ್ಧದ ಕೇಸ್‌ಗಳು ರದ್ದಾಗಿವೆ. ಇದ್ರಿಂದ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.