CrimeNational

ಗಾಂಜಾ ಅಮಲಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತನೆ

ಲಖನೌ; ಗಾಂಜಾ ಮತ್ತಿನಲ್ಲಿದ್ದ ಅರ್ಚಕನೊಬ್ಬ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಚಕನಿಗೆ ಸಾರ್ವಜನಿಕರು ಚಳಿ ಬಿಡಿಸಿದ್ದಾರೆ. ಒಂದಷ್ಟು ಯುವಕರು ಅರ್ಚಕನನ್ನು ಹೊತ್ತೊಯ್ದು ದೇಗುಲದಿಂದ ಹೊರಕ್ಕೆ ಹಾಕಿದ್ದಾರೆ.

ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ. ಗಾಂಜಾ ಸೇವಿಸಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸುತ್ತೀಯಾ ಎಂದು ಬೈಯ್ಯುತ್ತಾ ಯುವಕರು ಅರ್ಚಕನನ್ನು ಹೊರಗೆ ಹಾಕಿದ್ದಾರೆ. ಆದ್ರೆ ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಅರ್ಚಕನನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಅರ್ಚಕನನ್ನು ಹೊತ್ತೊಯ್ಯುವ ವಿಡಿಯೋ ಬಗ್ಗೆ ಪರ ವಿರೋಧದ ಚರ್ಚೆಗಳ ನಡೆಯುತ್ತಿವೆ. ತನಿಖೆ ನಂತರವಷ್ಟೇ ನಿಜ ಏನು ಅನ್ನೋದು ಗೊತ್ತಾಗುತ್ತೆ.

 

Share Post