ಫಸ್ಟ್ ರಿವ್ಯೂ.. ‘ಕ್ಲಾಸಿಕ್.. ಸ್ಟೈಲಿಶ್.. ಥ್ರಿಲ್ಲಿಂಗ್.. ಮಿಸ್ಟರಿ ಅಂಡ್ ರೊಮ್ಯಾಂಟಿಕ್’!ಇದು ರಾಧೆ ಶ್ಯಾಮ್ ಕತೆ
ಹೈದರಾಬಾದ್: ಭಾರತದಲ್ಲಿ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ರಾಧೇಶ್ಯಾಮ್ ಕೂಡ ಒಂದು.ಮಾರ್ಚ್ 11 ರಂದು ಬಿಡುಗಡೆಯಾಗಲಿರುವ ರಾಧೆ ಶ್ಯಾಮ್ ಚಿತ್ರಕ್ಕೆ ರೆಬೆಲ್ ಸ್ಟಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಈ ಚಿತ್ರವು ಈಗಾಗಲೇ ದೇಶಾದ್ಯಂತ ಹೆಚ್ಚು ನಿರೀಕ್ಷಿತವಾಗಿರುವುದರಿಂದ ಚಿತ್ರತಂಡ ಮತ್ತೊಮ್ಮೆ ಪ್ರಚಾರವನ್ನು ಪ್ರಾರಂಭಿಸಿದೆ. ದೇಶಾದ್ಯಂತ ಈವೆಂಟ್‌ಗಳು ಮತ್ತು ಸಂದರ್ಶನಗಳನ್ನು ನೀಡುತ್ತಾ ಸದ್ದು ಮಾಡುತ್ತಿದೆ.
ವಿಶ್ವದಾದ್ಯಂತ 10 ಸಾವಿರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ರಾಧೇಶ್ಯಾಮ್ ಯೂನಿಟ್ ಪ್ರಚಾರದಲ್ಲಿ ಭಾಗವಹಿಸುತ್ತಿರುವಾಗ.. ಚಿತ್ರದ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಈಗಾಗಲೇ ಚಿತ್ರದ ಬಗ್ಗೆ ನಿರ್ದೇಶಕರ ಜೊತೆಯಲ್ಲಿ ಚಿತ್ರತಂಡವೂ ಮಾತನಾಡುತ್ತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಕುರಿತಾದ ಮಾತು ಪ್ರಭಾಸ್ ಅಭಿಮಾನಿಗಳಿಗೆ ಕಿಕ್ ತರಿಸಿದೆ. ಇದೀಗ ರಾಧೇಶ್ಯಾಮ್ ಫಸ್ಟ್ ರಿವ್ಯೂ ಕೂಡ ಬಂದಿದೆ. ಓವರ್ಸೀಸ್ ಸೆನ್ಸಾರ್ ಮೆಂಬರ್ ಎಂದು ಹೇಳುವ ಉಮೈರ್ ಸಂಧು ಕೂಡಾ ಚಿತ್ರದ ಬಗ್ಗೆ ವಿಮರ್ಶೆಗಳನ್ನು ನೀಡಿದ್ದಾರೆ.
Done First Half of #RadheShyam ! Outstanding VFX used in the movie. #Prabhas? & #PoojaHegde chemistry is Electrifying ? ! Mystery continues in #RadheShyam. What a unique subject ❤
— Umair Sandhu (@UmairSandu) March 4, 2022
ರಾಧೇಶ್ಯಾಮ್ ಚಿತ್ರದ ಬಗ್ಗೆ ಟ್ವಿಟ್ಟರ್ ರಿವ್ಯೂ ನೀಡಿದ ಉಮೈರ್ ಸಂಧೂ, ರಾಧೇಶ್ಯಾಮ್ ಸಿನಿಮಾ ನೋಡಿದ್ದೇನೆ ವಿಶುವಲ್ ಎಫೆಕ್ಟ್ ಅದ್ಭುತವಾಗಿದೆ.. ಪ್ರಭಾಸ್-ಪೂಜಾ ಕೆಮಿಸ್ಟ್ರಿ ಎಲೆಕ್ಟ್ರಿಫೈಯಿಂಗ್ ಆಗಿದೆಯಂತೆ. ಸಿನಿಮಾದ ಕ್ಲೈಮ್ಯಾಕ್ಸ್ ಯಾರೂ ನಿರೀಕ್ಷಿಸದ ರೀತಿಯಲ್ಲಿ ಇರಲಿದೆ ಎಂದಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ಡ್ರೆಸ್ಸಿಂಗ್.. ನಟನೆ ಅದ್ಭುತ.. ಭಾರತದಲ್ಲಿ ಪ್ರಭಾಸ್ ಕ್ಲಾಸ್.. ಈ ಸಿನಿಮಾವನ್ನು ‘ಕ್ಲಾಸಿಕ್.. ಸ್ಟೈಲಿಶ್.. ಥ್ರಿಲ್ಲಿಂಗ್.. ಮಿಸ್ಟರಿ ಮತ್ತು ರೊಮ್ಯಾಂಟಿಕ್’ ಎಂದು ಉಮೈರ್ ಬಣ್ಣಿಸಿದ್ದಾರೆ.
Nobody can beat Class & Style of #Prabhas in India ! He has Sexiest Swag in #RadheShyam ! Totally LOVED & LOVED his performance & wardrobes ❤❤❤
— Umair Sandhu (@UmairSandu) March 4, 2022