BengaluruCinemaCrime

ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದ ನಟಿ ರಚಿತಾ ರಾಮ್‌ ಕಾರು..!

ಬೆಂಗಳೂರು; ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್‌ ಶೋ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಲು ನಟಿ ರಚಿತಾರಾಮ್‌ ಅವರು ಬಂದಿದ್ದರು. ಈ ವೇಳೆ ಅವರ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ. ಈ ವೇಳೆ ಕಾರಿನಲ್ಲಿ ನಟಿ ರಚಿತಾ ರಾಮ್‌ ಕೂಡಾ ಇದ್ದರು. ಆದ್ರೆ ಸೌಜನ್ಯಕ್ಕೂ ಕಾರ್ಮಿಕನನ್ನು ಮಾತನಾಡಿಸದೇ ಹಾಗೆಯೇ ಹೋಗಿದ್ದಾರೆ.

ರಚಿತಾ ರಾಮ್‌ ಅವರಿದ್ದ ಕಾರು ಸ್ವಚ್ಛತೆ ಮಾಡುತ್ತಿದ್ದ ಕಾರ್ಮಿಕನಿಗೆ ಗುದ್ದಿದೆ. ಕಾರ್ಮಿಕರಿಗೆ ಪಕ್ಕಕ್ಕೆ ಹಾರಿದ್ದರಿಂದ ಅಪಘಾತದಿಂದ ಕೊಂಚದರಲ್ಲಿ ತಪ್ಪಿಸಿಕೊಂಡಿದ್ದಾನೆ. ಇದನ್ನು ನೋಡಿದರೂ ರಚಿತಾ ರಾಮ್‌ ಕಾರು ನಿಲ್ಲಿಸಿ, ಕಾರ್ಮಿಕನನ್ನು ಮಾತನಾಡಿಸಿಲ್ಲ. ನೇರವಾಗಿಒ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ನಟಿಗೆ ಕನಿಷ್ಠ ಮಾನವೀಯತೆ ಕೂಡಾ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share Post