BengaluruCinemaLifestyleNational

ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಖ್ಯಾತ ನಟ ಧನುಷ್

ಚಿತ್ತೂರು; ತಮಿಳಿನ ಪ್ರಖ್ಯಾತ ನಟ ಧನುಷ್‌ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ. ಇಂದು ಬೆಳಗ್ಗೆ ತಿರುಮಲಕ್ಕೆ ಆಗಮಿಸಿದ್ದ ಅವರು, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಧನುಷ್‌ ಹಾಗೂ ಮಕ್ಕಳಾದ ಯಾತ್ರಾ ಹಾಗೂ ಲಿಂಗ ಕೂಡಾ ಮುಡಿಕೊಟ್ಟಿದ್ದಾರೆ.

ಖ್ಯಾತ ನಟರಾದರೂ ಧನುಷ್‌ ಹಾಗೂ ಮಕ್ಕಳು ಸರತಿ ಸಾಲಿನಲ್ಲೇ ನಿಂತು ದರ್ಶನ ಪಡೆದಿದ್ದಾರೆ. ಈ ಫೋಟೋಗಳು ಎಲ್ಲೆಡೆ ವೈರಲ್‌ ಆಗಿವೆ. ಸ್ಟಾರ್‌ ನಟರಾದರೂ ವಿಶೇಷ ದರ್ಶನ ಪಡೆಯದೇ ಸಾಮಾನ್ಯರಂತೆ ಸಾಮಾನ್ಯ ಭಕ್ತರ ಜೊತೆ ಸಾಲಿನಲ್ಲಿ ನಿಂತು ತಿಮ್ಮಪ್ಪ ದರ್ಶನ ಪಡೆದಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕಾಗಿ ಧನುಷ್ ಉದ್ದನೆಯ ಕೂದಲು ಬೆಳೆಸಿದ್ದರು. ಸಿನಿಮಾದ ಶೂಟಿಂಗ್‌ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಅವರು ತಿಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

 

Share Post