Puneeth Rajkumar ನೆನೆದು ಭಾವುಕರಾದ ರಮ್ಯ
ಬೆಂಗಳೂರು : Puneeth Rajkumar ನಮ್ಮನ್ನೆಲ್ಲಾ ಅಗಲಿ ಎರಡು ತಿಂಗಳು ಸಾಗಿದೆ. ಆದರೂ ಅಪ್ಪು ಅವರ ಸಾವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮೋಹಕ ತಾರೆ ರಮ್ಯ ಕೂಡ ಅಪ್ಪು ಅವರನ್ನು ನೆನೆದು ಭಾವುಕರಾಗಿದ್ದಾರೆ. ಅಭಿ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದ ರಮ್ಯ Puneeth Rajkumar ಜೊತೆ ೩ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು.
ಅಭಿ, ಆಕಾಶ್ ಮತ್ತು ಅರಸು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದರು. ರಮ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದು ಬೇಸರ ಹೊರ ಹಾಕಿದ್ದಾರೆ. ನಿನ್ನ ಕಂಡ ದಿನದಿಂದ ಏಕೋ ನಾನು ನನ್ನಲಿಲ್ಲ ಎಂಬ ಅರಸು ಸಿನಿಮಾದ ಹಾಡನ್ನು ರಮ್ಯ ಪೋಸ್ಟ್ ಮಾಡಿದ್ದಾರೆ.
ವೀಡಿಯೋ ಜೊತೆಗೆ ರಮ್ಯಾ ಕ್ಯಾಪ್ಷನ್‍ನಲ್ಲಿ ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ ಎಂಬ ಸಾಲುಗಳ ಜೊತೆಗೆ ಅಪ್ಪು, ಅರಸು ಎಂದು ಬರೆದುಕೊಂಡಿದ್ದಾರೆ.
Samantha : ಸೆಕ್ಸಿ ಆಗಿರೋದು ಮಾತ್ರ ನೆಕ್ಸ್ಟ್ ಲೆವೆಲ್ ಹಾರ್ಡ್‌ವರ್ಕ್