ಮಹಾರಾಷ್ಟ್ರ ಸರ್ಕಾರದ ಸಕಲ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ
ಮಹಾರಾಷ್ಟ್ರ: ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಇಡೀ ಭಾರತ ದೇಶ ಸಂತಾಪ ವ್ಯಕ್ತಪಡಿಸಿದೆ. 92 ವರ್ಷದ ಗಾನ ಕೋಗಿಲೆ ನಿಧನಕ್ಕೆ ಚಿತ್ರರಂಗದಲ್ಲಿ ತೀರವ ಮೌನ ಆವರಿಸಿದೆ. ಲತಾ ಮಂಗೇಶ್ಕರ್ ನಿಧನಕ್ಕೆ ರಾಜಕೀಯ ಗಣ್ಯರು, ಚಿತ್ರರಂಗ, ಕೋಟಿ ಕೋಟಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ತಮ್ಮ ಕಂಚಿನ ಕಂಠದಿಂ ಹಲವು ದಶಕಗಳಿಂದ ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದರೆ.
ಇವರ ಅಂತ್ಯಸಂಸ್ಕಾರವನ್ನು ಮಹಾರಾಷ್ಟ್ರ ಸರ್ಕಾರ ಸಕಲ ಗೌರವಗಳೊಂದಿಗೆ ನೆರವೇರಿಸಲಿದೆ. ಸರ್ಕಾರದ ಲಾಂಛನಗಳೊಂದಿಗೆ ಲತಾ ಮಂಗೇಶ್ಕರ್ ಅವರಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ. ಅಧಿಕೃತ ಸರ್ಕಾರಿ ಚಿಹ್ನೆಗಳೊಂದಿಗೆ ವಿಧಿವಿಧಾನಗಳನ್ನು ನೆರವೇರಿಸುವುದಾಗಿ ಮಹಾ ಸರ್ಕಾರ ತಿಳಿಸಿದೆ.
ಲತಾ ಮಂಗೇಶ್ಕರ್ ಸಾವಿನ ಸ್ಮರಣಾರ್ಥ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನೂ ಘೋಷಿಸಲಾಗಿದೆ. ಲತಾಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಪೆದ್ದಾರ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಶಿಫ್ಟ್. ಮನೆಯಲ್ಲಿ ಕೆಲ ಸಮಯ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಬಳಿಕ ಪಾರ್ಥಿವ ಶರೀರವನ್ನು ಮುಂಬೈನ ಶಿವಾಜಿ ಪಾರ್ಕ್‌ಗೆ ಸ್ಥಳಾಂತರ ಮಾಡಲಾಗುವುದು. ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 6.30ರ ವೇಳೆಗೆ ಮಂಗೇಶ್ಕರ್ ಅಂತಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.