Cinema

ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ಇನ್ನಿಲ್ಲ

ದೆಹಲಿ; ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ದೃಢಪಡಿಸಿವೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಆಗಸ್ಟ್ 10ರಂದು ದೆಹಲಿಯ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ರಾಜುಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಒಂದು ವಾರದಿಂದ ಅವರಿಗೆ  ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಚೇತರಿಕೆಗಾಗಿ ಲಕ್ಷಾಂತರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದ್ರೆ, ರಾಜ ಶ್ರೀವಾತ್ಸವ್‌ ಮಾತ್ರ ಬದುಕಿ ಬರಲಿಲ್ಲ.

     ಹಿಂದಿ ಚಿತ್ರರಂಗದಿಂದ ರಾಜು ಶ್ರೀವಾಸ್ತವ ​ ಬಣ್ಣದ ಬದುಕು ಆರಂಭಿಸಿದರು. ‘ಮೈನೆ ಪ್ಯಾರ್ ಕಿಯಾ’, ‘ಬಾಜಿಗರ್​’, ‘ಬಾಂಬೆ ಟು ಗೋವಾ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಂತರ ಸ್ಟ್ಯಾಂಡಪ್​ ಕಾಮಿಡಿಯನ್ ಆಗಿಯೂ ಗುರುತಿಸಿಕೊಂಡಿದ್ದರು. ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್​’ನಲ್ಲಿ ಎರಡನೇ ರನ್ನರ್​ ಅಪ್ ಆದರು. ಇನ್ನು, ಹಿಂದಿ ಬಿಗ್ ಬಾಸ್​ನ ಮೂರನೇ ಸೀಸನ್​ಗೆ ಅವರು ಸ್ಪರ್ಧಿ ಆಗಿದ್ದರು.

ರಾಜು ಶ್ರೀವಾಸ್ತವ ಅವರ ನಿಧನಕ್ಕೆ ಅಭಿಮಾನಿಗಳು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳು ಕಂಬಿನಿ ಮಿಡಿಯುತ್ತಿದ್ದಾರೆ. ಬಾಲಿವುಡ್​ನ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

Share Post