ಈ ಗಂಡು ಮರಕ್ಕೆ ಸಂಗಾತಿ ಬೇಕಂತೆ..!; ಪ್ರಪಂಚದಲ್ಲಿ ಉಳಿದಿರೋದು ಇದೊಂದೇ ಮರ!
ಪ್ರಪಂಚದಲ್ಲಿ ಎಷ್ಟೋ ಸಸ್ಯ ಹಾಗೂ ಮರಗಳ ಪ್ರಬೇಧಗಳು ಅಳಿವಿನಂಚಿನಲ್ಲಿವೆ.. ಅದೇ ರೀತಿಯ ಮರ ಪ್ರಬೇಧವೊಂದು ಪತ್ತೆಯಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಆ ಪ್ರಬೇಧದ ಒಂದೇ ಒಂದು ಮರ ಉಳಿದಿದೆ.. ಅದರ ಸಂತತಿ ಬೆಳೆಯಬೇಕಾದರೆ, ಇನ್ನೊಂದು ಹೆಣ್ಣು ಮರ ಬೇಕು.. ಯಾಕಂದ್ರೆ ಈಗ ವಿಜ್ಞಾನಿಗಳಿಗೆ ಸಿಕ್ಕಿರೋದು ಒಂದೇ ಒಂದು ಗಂಡು ಮರ.. ಇದಕ್ಕೆ ಸಂಗಾತಿಯಾಗಿ ಹೆಣ್ಣು ಮರ ಸಿಕ್ಕಿದರೆ ಮಾತ್ರ, ಈ ಪ್ರಬೇಧವನ್ನು ಬೆಳೆಸುವುದಕ್ಕೆ ಹಾಗೂ ಉಳಿಸುವುದಕ್ಕೆ ಸಾಧ್ಯ.. ಹೀಗಾಗಿ ವಿಜ್ಞಾನಿಗಳು, ಈ ಮರಕ್ಕೆ ಸಂಗಾತಿಯನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ.. ಇದಕ್ಕೆ ಕೃತಕ ಬುದ್ಧಿಮತ್ತೆಯ ನೆರವು ಪಡೆದುಕೊಳ್ಳುತ್ತಿದ್ದಾರೆ..
ಇಂಗ್ಲೆಂಡಿನ ಸೌತಾಂಪ್ಟನ್ ವಿಶ್ವವಿದ್ಯಾಲಯದ ನೇತೃತ್ವದ ಸಂಶೋಧನಾ ಯೋಜನೆಯ ಭಾಗವಾಗಿ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದ ಸಾವಿರಾರು ಎಕರೆ ಅರಣ್ಯವನ್ನು ಶೋಧಿಸುತ್ತಿದ್ದಾರೆ. ಅಂದಹಾಗೆ ಈ ಮರದ ಹೆಸರು Encephalartos woodii.. ಈ ಸಸ್ಯ ಪ್ರಭೇದವು ಬಹುತೇಕ ಅಳಿವಿನಂಚಿನಲ್ಲಿದೆ. ಪುರುಷ ಮಾದರಿಗಳನ್ನು ಮಾತ್ರ ಸಂರಕ್ಷಿಸಲಾಗಿದೆ. ಡೈನೋಸಾರ್‌ಗಳು ಭೂಮಿಗೆ ಕಾಲಿಡುವ ಮೊದಲು ಈ ಮರಗಳು ಅಸ್ತಿತ್ವದಲ್ಲಿವೆ. ಆದರೆ ಈಗ ಅವು ವಿನಾಶದ ಅಂಚಿನಲ್ಲಿವೆ.
ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕಿ ಡಾ ಲಾರಾ ಸಿಂಟಿ ಅವರು ಈ ಯೋಜನೆಯ ನೇತೃತ್ವದ ವಹಿಸಿಕೊಂಡಿದ್ದಾರೆ. ಈ ವಿಜ್ಞಾನಿಗಳ ತಂಡ ಈಗ ಕೃತಕ ಬುದ್ಧಿಮತ್ತೆ ಹೊಂದಿರುವ ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಹೆಣ್ಣು ಮರವನ್ನು ಹುಡುಕುತ್ತಿದ್ದಾರೆ.. ಹೆಣ್ಣು ಮರ ಸಿಕ್ಕರೆ ಇದರ ಪ್ರಬೇಧ ವೃದ್ಧಿ ಮಾಡೋದಕ್ಕೆ ಪ್ರಯತ್ನಿಸಲಾಗುತ್ತದೆ..
ಎಲ್ಲೋ ಒಂದು ಹೆಣ್ಣು ಮರ ಇರಬಹುದು ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ ಎಂದು ಡಾ.ಲಾರಾ ಸಿಂಟಿ ಹೇಳಿಕೊಂಡಿದ್ದಾರೆ.. ಈ ಜಾತಿಯ ಮರವನ್ನು ಮೊದಲು 1895 ರಲ್ಲಿ ದಕ್ಷಿಣ ಆಫ್ರಿಕಾದ ಪೂರ್ವ ಕರಾವಳಿಯ ಸಮೀಪವಿರುವ ನೋಯ್ ಕಾಡಿನಲ್ಲಿ ಕಂಡುಹಿಡಿಯಲಾಯಿತು. ಇದು ಗಂಡು ಮರವಾಗಿದ್ದು, ಇದಕ್ಕೆ ಒಂದು ಹೆಣ್ಣು ಮರ ಬೇಕಾಗಿದೆ.. ಹೀಗಾಗಿ ಆ ಹೆಣ್ಣು ಮರಕ್ಕಾಗಿ ಹುಡುಕಾಡಲಾಗುತ್ತಿದೆ..