Cinema

ಅಭಿಮಾನಿ ಹುಚ್ಚಾಟಕ್ಕೆ ಬೇಸ್ತು ಬಿದ್ದ ಪವರ್‌ ಸ್ಟಾರ್-ಕಾರಿನ ಮೇಲಿಂದ ಬಿದ್ದ ವಿಡಿಯೋ ವೈರಲ್

ನರಸಾಪುರ: ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಅಕ್ಕರೆ. ಲಕ್ಷಾಂತರ ಮಂದಿ ಫ್ಯಾನ್‌ ಫಾಲೋಯಿಂಗ್‌ ಹೊಂದಿರುವ ಪವನ್‌ ಕಲ್ಯಾಣ್‌ ಅತ್ತ ಸಿನಿಮಾ ಇತ್ತ ಪಕ್ಷ ಸಂಗಟನೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಜನಸೇನಾ ಪಕ್ಷವನ್ನು ಸದೃಢವಾಗಿಸಲು ಅನೇಕ ಸಮಾಜ ಮುಖಿ ಕಾರ್ಯಗಳು ಹಾಗೂ ರ್ಯಾಲಿಗಳನ್ನು ಮಾಡ್ತಿದಾರೆ. ಇದರ ಹಿನ್ನೆಲೆ ನಿನ್ನೆ ಸರಸಾಪುರಂಗೆ ಭೇಟಿ ನೀಡಿ ರ್ಯಾಲಿಯನ್ನು ಹಮ್ಮಿಕೊಂಡಿದ್ರು.

ಈ ವೇಳೆ ಸನ್‌ ರೂಫ್‌ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸಿ ನಮಸ್ಕಾರ ಮಾಡ್ತಿದ್ದ ಪವನ್‌ ಕಲ್ಯಾಣ್‌ಗೆ ಅಚಾನಕ್‌ ಘಟನೆ ನಡೆದಿದೆ. ಹುಚ್ಚು ಅಭಿಮಾನಿ ವರ್ತನೆಗೆ ತೂವ್‌ ಆಕ್ರೋಶ ವ್ಯಕ್ತವಾಗಿದೆ. ಸನ್‌ ರೂಫ್‌ ಕಾರಿನ ಟಾಪ್‌ ಮೇಲೆ ಪವನ್‌ ಕಲ್ಯಾಣ್‌ ನಿಂತಿದ್ದಾಗೆ ಹಿಂಬದಿಯಿಂದ ಬಂದ ಅಭಿಮಾನಿ ಅವರನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆಯ ತಪ್ಪಿ ಅಭಿಮಾನಿ ಕೆಳಗೆ ಬಿದ್ದಿದ್ದಾನೆ. ಜೊತೆಗೆ ಪವನ್‌ ಕಲ್ಯಾಣ್‌ ಕೂಡ ಕಾರಿನ ಮೇಲೆ ಬಿದ್ದಿದ್ದಾರೆ..

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗ್ತಿದ್ದು, ಅಭಿಮಾನಿ ಹುಚ್ಚಾಟಕ್ಕೆ ಜನ ಬೇಸರ ವ್ಯಕ್ತಪಡಸಿದ್ದಾರೆ. ಪವನ್‌ ಕಲ್ಯಾಣ್‌ಗೆ ಏನೂ ಆಗಿಲ್ಲ ಎಂದು ಆಪ್ತರು ತಿಳಿಸಿದ್ದಾರೆ. ಸೆಲೆಬ್ರೆಟಿಗಳಿಗೆ ಅವರದ್ದೇ ಆದ ಸ್ಥಾನ ಇರುತ್ತದೆ. ನಾವುಅ ವರಿಗೆ ಗೌರವ ನೀಡಬೇಕು ಅದು ಬಿಟ್ಟ ಹೀಗೆ ಅವರನ್ನು ಮುಜುಗರಕ್ಕೆ ಒಳಗಾಗುವಂತಹ ಕೆಲಸ ಮಾಡಬಾರದು ಎಂದು ಕಾಮೆಂಟ್‌ಗಳು ವ್ಯಕ್ತವಾಗಿವೆ.

ಸದ್ಯ ಭೀಮ್ಲಾನಾಯಕ್‌ ಚಿತ್ರದಲ್ಲಿ ಪವನ್‌ ಕಲ್ಯಾಣ್‌ ನಟಿಸಿದ್ದು, ರಾಣಾ ದಗ್ಗುಬಾಟಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ ಫೆಬ್ರವರಿ 25ಕ್ಕೆ ತೆರೆಗೆ ಬರಲಿದೆ.

Share Post