Cinema

ಯುವ ರಾಜ್‌ಕುಮಾರ್‌ ಚೊಚ್ಚಲ ಸಿನಿಮಾ; ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ

ಬೆಂಗಳೂರು; ಪ್ರಪಂಚದಾದ್ಯಂತ ಕೆ.ಜಿ.ಎಫ್‌ ಚಾಪ್ಟರ್‌–2 ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾ ಸಕ್ಸಸ್‌ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಹಲವಾರು ಸಿನಿಮಾಗಳ ನಿರ್ಮಾಣಕ್ಕೆ ಕೈಹಾಕಿದೆ. ಅದೇ ರೀತಿ ಯುವ ರಾಜ್‌ಕುಮಾರ್‌ ಅವರನ್ನು ಕೂಡಾ ಬೆಳ್ಳಿ ಪರದೆಗೆ ಪರಿಚಯ ಮಾಡುವುದಕ್ಕಾಗಿ ಹೊಂಬಾಳೆ ಫೀಲ್ಮ್ಸ್‌ ತಯಾರಿ ನಡೆಸುತ್ತಿದೆ.

ಆನಂದ್‌ರಾಮ್‌ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಕೆಲ ವರ್ಷಗಳ ಹಿಂದೆ ಯುವ ರಣದೀರ ಕಂಠಿರವ ಎಂಬ ಸಿನಿಮಾ ಯುವ ರಾಜ್‌ಕುಮಾರ್‌ಗಾಗಿ ಸೆಟ್ಟೇರಿತ್ತು. ಆದ್ರೆ ಕಾರಣಾಂತರಗಳಿಂದ ಈ ಸಿನಿಮಾ ಮುಂದೂಡಲ್ಪಟ್ಟಿದೆ. ಹೀಗಾಗಿ ಆನಂದ್‌ ರಾಮ್‌ ಅವರ ನಿರ್ದೇಶನದ ಸಿನಿಮಾನೇ ಯುವ ರಾಜ್‌ ರಾಜ್‌ಕುಮಾರ್‌ ಅವರ ಚೊಚ್ಚಲ ಸಿನಿಮಾ ಆಗಲಿದೆ. ಈ ಬಗ್ಗೆ ಹೊಂಬಾಳೆ ಫಿಲ್ಸ್ಟ್‌ ಟ್ವೀಟ್‌ ಕೂಡಾ ಮಾಡಿದೆ. ಈ ಟ್ವೀಟ್‌ ವಿವರ ಇಲ್ಲಿದೆ.

‘ಹೊಂಬಾಳೆ ಸಂಸ್ಥೆಗೂ ಡಾ.ರಾಜ್‌ಕುಮಾರ್‌ ಕುಟುಂಬದ ನಡುವೆ ಇರುವ ಸಂಬಂಧದ ಮುಂದುವರಿದ ಭಾಗವಾಗಿ ನಾವು ನಮ್ಮ ಹೊಂಬಾಳೆ ಫಿಲ್ಮ್ಸ್‌ನಲ್ಲಿ ದೊಡ್ಮನೆಯ ಮೂರನೇ ತಲೆಮಾರಿನ ಯುವ ರಾಜ್‌ಕುಮಾರ್‌ರನ್ನು ನಾಯಕನಟನಾಗಿ ಬೆಳ್ಳಿಪರದೆಗೆ ಪರಿಚಯಿಸಲು ಹೆಮ್ಮೆ ಪಡುತ್ತೇವೆ. ಈ ಪ್ರಯತ್ನದಲ್ಲಿ ನಮ್ಮ ಸಂಸ್ಥೆಯಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್‌ ಆನಂದರಾಮ್‌ರವರ ಸಾರಥ್ಯದಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದೇವೆ.ʼ

ಇನ್ನು ಚೊಚ್ಚಲ ಚಿತ್ರದ ಬಗ್ಗೆ ಟ್ವೀಟ್‌ ಮಾಡಿರುವ ಯುವ ರಾಜ್‌ ಕುಮಾರ್‌ ಹೀಗೆ ಹೇಳಿದ್ದಾರೆ.

‘ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ ಮಿಸ್‌ ಯೂ ಚಿಕ್ಕಪ್ಪ’

Share Post