BengaluruCinema

ಕೆಲಸದಾಕೆಗೆ ಮದುವೆ ಮಾಡಿಸಿದ ವಿನೋದ್ ರಾಜ್

ಬೆಂಗಳೂರು; ನಟ ವಿನೋದ್‌ ರಾಜ್‌ ಕುಮಾರ್‌ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಬ್ಯಾಕ್‌ ಟೂ ಬ್ಯಾಕ್‌ ಗುಡ್‌ ನ್ಯೂಸ್‌ ಕೊಡುತ್ತಿದ್ದಾರೆ ವಿನೋದ್‌ ರಾಜ್.‌

ಇತ್ತೀಚಿಗೆ ತಾಯಿ ಲೀಲಾವತಿ ಅವರ ಆಸೆಯಂತೆ ಜನರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಿದ್ದ ವಿನೋದ್ ರಾಜ್ ಈಗ ಮತ್ತೊಂದು ಶುಭ ಸುದ್ದಿ ಕೊಟ್ಟಿದ್ದಾರೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕಂಕಣ ಭಾಗ್ಯ ಕಲ್ಪಿಸಿರುವ ವಿನೋದ್‌ ರಾಜ್‌, ಖುದ್ದು ತಾವೇ ನಿಂತು ಯುವತಿಯ ಮದುವೆ ಮಾಡಿಸಿದ್ದಾರೆ. ಮದ್ದೂರು ತಾಲೂಕು ಹುಳಗನಹಳ್ಳಿ ಪ್ರಕಾಶ್ ಜೊತೆ ಯುವತೊಯ ವಿವಾಹ ಮಾಡಿಸಿದ್ದು, ನಾಲ್ಕೈದು ವರ್ಷಗಳಿಂದ ವಿನೋದ್ ರಾಜ್ ತೋಟದಲ್ಲಿ ಕೆಲಸ ಮಾಡುತ್ತಿದ್ದರಂತೆ ಅನ್ನಪೂರ್ಣ. ಪೊಲೀಸ್ ಇಲಾಖೆಯಲ್ಲಿ 7 ವರ್ಷದಿಂದ ಹೋಂ ಗಾರ್ಡ್ ಸೇವೆ ಸಲ್ಲಿಸುತ್ತಿರುವ ವರ ಪ್ರಕಾಶ್ ಹಾಗೂ ಅನ್ನಪೂರ್ಣ ಅವರ ವಿವಾಹವನ್ನು ಸರಳವಾಗಿ ನೆಲಮಂಗಲದ ಪುರಾತನ ಗೂಬೆಕಲ್ಲಮ್ಮ ದೇವಾಸ್ಥಾನದಲ್ಲಿ, ನೂರಾರು ಜನರ ಸಮ್ಮುಖದಲ್ಲಿ ಮದುವೆ ಮಾಡಿಸುವ ಮೂಲಕ ನಟ ವಿನೋದ್‌ ರಾಜ್‌ ಮತ್ತೊಂದು ಒಳ್ಳೆಯ ಕಾರ್ಯ ಮಾಡಿದ್ದಾರೆ.

Share Post