CinemaHealth

ಮೆಗಾಸ್ಟಾರ್‌ ಚಿರಂಜೀವಿಗೆ ಕೊರೊನಾ ಪಾಸಿಟಿವ್:ಐಸೋಲೇಟ್‌ ಆದ ನಟ

ಹೈದರಾಬಾದ್:‌ ಇತ್ತೀಚೆಗೆ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಾರಿ ಅನೇಕ ಸೆಲೆಬ್ರಿಟಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.  ಬಾಲಿವುಡ್, ತಮಿಳು, ತೆಲುಗು ಮತ್ತು ಮಲಯಾಳಂ ತಾರೆಯರು ಈಗಾಗಲೇ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದಾರೆ. ಇನ್ನೂ ಹೋಂ ಐಸೋಲೇಷನ್‌ನಲ್ಲಿ ಇರುವವರೂ ಇದ್ದಾರೆ. ಪ್ರತಿದಿನ ಯಾರೋ ಒಬ್ಬ ಸೆಲೆಬ್ರಿಟಿಗೆ ಕರೋನಾ ದೃಢಪಡುತ್ತಿದೆ. ಈಗ ಮೆಗಾಸ್ಟಾರ್‌ ಚಿರಂಜೀವಿಗೂ ಸಹ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

“ನಾನು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು  ತೆಗೆದುಕೊಂಡರೂ ಕೂಡ, ಕೆಲವು ಸೌಮ್ಯ ಲಕ್ಷಣಗಳು ಕಾಣಿಸಿಕೊಂಡವು. ಕೊರನಾ ಪರೀಕ್ಷೆಗೆ ಒಳಗಾದಾಗ ಸೋಂಕು ಇರುವುದು ದೃಢವಾಗಿದೆ.  ನಿನ್ನೆ ರಾತ್ರಿಯಿಂದ ನಾನು ಐಸೋಲೇಟ್‌ ಆಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಕೊರೊನಾ ಪರೀಕ್ಷೆಗೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.  ನಾನು ಶೀಘ್ರದಲ್ಲೇ ಗುಣಮುಖನಾಗಿ ನಿಮ್ಮ ಮುಂದೆ ಬರುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.  ಚಿರಂಜೀವಿ ಬೇಗ ಗುಣಮುಖರಾಗಲಿ ಎಂದು ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು  ಹಾರೈಸಿದ್ದಾರೆ.

Share Post