Cinema

ಜನವರಿ ೧೪ಕ್ಕೆ ರಾಧೆಶ್ಯಾಮ್‌ ಸಿನಿಮಾ ರಿಲೀಸ್‌

ಟಾಲಿವುಡ್‌ : ಇತ್ತೀಚೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಚಿತ್ರರಂಗ ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ದೇಶದಲ್ಲಿ ಕೊರೋನಾ ಹಾಗೂ ಒಮಿಕ್ರಾನ್‌ ತಂಡವವಾಡುತ್ತಿದೆ. ಹೀಗಾಗಿ ಕೆಲ ನಿರ್ಮಾಪಕರು ಚಿಂತೆಗೀಡಾಗಿದ್ದಾರೆ. ಯಾಕಂದರೆ ಕೊರೋನಾ ಹಾವಳಿಯಿಂದ ದೇಶದಲ್ಲಿ ನೈಟ್‌ ಕರ್ಫ್ಯೂ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೂ ಸಹ ಈ ಎಫೆಕ್ಟ್‌ ತಟ್ಟಿದೆ. ಇದ್ದರಿಂದ ಸಾಕಷ್ಟು ಸಿನಿಮಾಗಳು ಬಿಡುಗಡೆ ಹಂತದಲ್ಲಿ ಇತ್ತು. ಆದರೆ ಚಿತ್ರಮಂದಿರದ ಸಮಸ್ಯೆಯಿಂದ ಬಿಡುಗಡೆಯಾಗಬೇಕಿದ್ದ ಸಿನಿಮಾಗಳು ಮುಂದಕ್ಕೆ ಹೋಗಿವೆ. ರಾಜಮೌಳಿ ನಿರ್ದೇಶನದ ಆರ್‌ ಆರ್‌ ಆರ್‌ ಸಿನಿಮಾ ಕೂಡ ಮುಂದಕ್ಕೆ ಹೋಗಿದೆ. ಇದೀಗ ಪ್ರಭಾಸ್‌ ನಟನೆಯ ಬಹು ನಿರೀಕ್ಷೆಯ ಸಿನಿಮಾ ರಾಧೆ ಶ್ಯಾಮ್‌ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಜನವರಿ ೧೪ ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್‌ ಆಗಲಿದೆ. ಪ್ರಭಾಸ್‌ ಅಭಿಮಾನಿಗಳಿಗೆ ಈ ಸಿನಿಮಾ ಮುಂದಕ್ಕೆ ಹೋಗಬಹುದಾ ಎಂಬ ಅನುಮಾನ ಕಾಡಿತ್ತು. ಆದರೆ ವಂಶಿ ಶೇಖರ್‌ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಈ ಕುರಿತು ಸಿನಿಮಾ ಪ್ರಚಾರಕ ವಂಶಿ ಶೇಖರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಈ ಚಿತ್ರದ ಬಿಡುಗಡೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್‌ ಜೋಡಿಯಾಗಿ ಪೂಜಾ ಹೆಗ್ಡೆ ಬಣ್ಣಹಚ್ಚಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಸಖತ್‌ ಆಗಿ ಈ ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಯುವಿ ಕ್ರಿಯೇಷನ್‌ ನಿರ್ಮಾಣವಾಗುತ್ತಿದೆ. ಈಗಾಗಲೇ ಟ್ರೇಲರ್‌ ಮತ್ತು ಹಾಡುಗಳಿಂದಲೇ ಸಖತ್‌ ಸೌಂಡ್‌ ಮಾಡಿದ್ದ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

Share Post