Cinema

ಮೆಗಾಸ್ಟಾರ್‌ ಚಿರಂಜೀವಿ ನಟನೆಯ ಭೋಲಾಶಂಕರ ಫಸ್ಟ್‌ ಲುಕ್‌ ರಿಲೀಸ್-ಮಾಸ್‌ ಲುಕ್‌ನಲ್ಲಿ ಚಿರು

ಹೈದರಾಬಾದ್:‌ ಮಹಾಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಚಿತ್ರತಂಡ ಭೋಲಾ ಶಂಕರ್ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ಭೋಲಾ ಶಂಕರ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ರು.

ವೈಬ್ ಆಫ್ ಭೋಲಾ ಎಂಬ ಟ್ಯಾಗ್‌ ಲೈನ್‌ ಹಾಕಿ ಮೆಗಾಸ್ಟಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ.  ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಮಹಾಶಿವರಾತ್ರಿಗೆ ಫಸ್ಟ್‌ ಲುಕ್‌ಅನ್ನು ಉಡುಗೊರೆ ನೀಡಿದ್ದಾರೆ.

ಮೆಹರ್ ರಮೇಶ್ ನಿರ್ದೇಶನದಲ್ಲಿ ಭೋಲಾ ಶಂಕರ್ ಚಿತ್ರ ನಿರ್ಮಾಣವಾಗುತ್ತಿದೆ. ಚಿರಂಜೀವಿಗೆ ತಮನ್ನಾ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಅವರ ತಂಗಿ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ.

Share Post