International

ಕೀವ್‌ ನಗರ ಬಿಟ್ಟು ಕೂಡಲೇ ಹೊರಬನ್ನಿ; ಭಾರತೀಯರಿಗೆ ಭಾರತ ಸರ್ಕಾರ ಸೂಚನೆ

ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿ ಮುಂದುವರೆದಿದೆ, ಅದ್ರಲ್ಲೂ ಉಕ್ರೇನ್‌ ರಾಜಧಾನಿ ಕೀವ್‌ ಹಾಗೂ ಖಾರ್ಕೀವ್‌ ನಗರದಲ್ಲಿ ಭೀತಿಯ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕೀವ್‌ ನಗರದಲ್ಲಿರುವ ಭಾರತೀಯರು ಹೊರಬರುವಂತೆ ಭಾರತ ಸಂದೇಶ ನೀಡಿದೆ. ತುರ್ತಾಗಿ ಕೀವ್‌ ನಗರ ಬಿಟ್ಟು ಹೊರಬನ್ನಿ. ಗಡಿ ಪ್ರದೇಶಗಳಿಗೆ ಬನ್ನಿ ಎಂದು ಭಾರತ ಸೂಚಿಸಿದೆ.

ರಷ್ಯಾದ ಪ್ರಮುಖ ಉದ್ದೇಶವೇ ಕೀವ್‌ ನಗರವನ್ನು ವಶಪಡಿಸಿಕೊಳ್ಳುವುದು. ಹೀಗಾಗಿ ಅದು ಕಳೆದ ಆರು ದಿನಗಳಿಂದ ಕೀವ್‌ ನಗರದ ಮೇಲೆ ದಾಳಿ ಮುಂದುವರೆಸಿದೆ. ಕೀವ್‌ ನಗರದಲ್ಲಿ ನೂರಾರು ಭಾರತೀಯರು ಸಿಲುಕಿದ್ದಾರೆ. ಅವರೆಲ್ಲಾ ಕೀವ್‌ ನಗರ ಬಿಟ್ಟು ಹೊರಬಂದರೆ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬಹುದು. ಈ ಹಿನ್ನೆಲೆಯಲ್ಲಿ ಕೀವ್‌ನಲ್ಲಿರುವವರು, ಕೀವ್‌ ನಗರ ಬಿಟ್ಟು ಹೊರಬನ್ನಿ ಎಂದು ಭಾರತ ಸಂದೇಶ ರವಾನಿಸಿದೆ.

 

 

Share Post