CinemaInternationalLifestyle

Grammy Award | ಭಾರತದಕ್ಕೆ ಮೂರು ಗ್ರ್ಯಾಮಿ ಪ್ರಶಸ್ತಿಗಳು ಗರಿ!

ನವದೆಹಲಿ; ಪ್ರತಿಷ್ಠಿತ 66ನೇ ಗ್ರ್ಯಾಮಿ ಅವಾರ್ಡ್‌ಗಳನ್ನು ಇಂದು ಘೋಷಣೆ ಮಾಡಲಾಗಿದೆ. ಇದರಲ್ಲಿ ಭಾರತಕ್ಕೆ ಮೂರು ಪ್ರಶಸ್ತಿಗಳು ಸಿಕ್ಕಿದ್ದು, ದಿ ಮೂಮೆಂಟ್ ಆಲ್ಬಂಗಾಗಿ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶಂಕರ್ ಮಹಾದೇವನ್ ಅವರ ಮ್ಯೂಸಿಕ್ ಬ್ಯಾಂಡ್ ‘ಶಕ್ತಿ’ ಅವರ ‘ದಿಸ್ ಮೊಮೆಂಟ್’ ಆಲ್ಬಂ ಅತ್ಯುತ್ತಮ ಜಾಗತಿಕ ಸಂಗೀತ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಶಕ್ತಿ ಬ್ಯಾಂಡ್ ಗಿಟಾರ್ ವಾದಕ ಜಾನ್ ಮೆಕ್ಲಾಫ್ಲಿನ್, ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ಮತ್ತು ಗಾಯಕ ಶಂಕರ್ ಮಹಾದೇವನ್ ಅವರನ್ನು ಒಳಗೊಂಡಿದೆ. ಇದೊಂದು ಫ್ಯೂಷನ್ ಬ್ಯಾಂಡ್. ಬೊಕಾಂಟೆ, ಸುಸಾನಾ ಬಾಕಾ, ಡೇವಿಡೊ, ಬರ್ನಾ ಬೇ ಅವರಂತಹ ಕಲಾವಿದರನ್ನು ಈ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ.

ಟೇಲರ್ ಸ್ವಿಫ್ಟ್, ಮಿಲೀ ಸೈರಸ್, ಸೆಜಾ ಮತ್ತು ಬಿಲ್ಲಿ ಎಲಿಶ್ ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. ಟೇಲರ್ ಸ್ವಿಫ್ಟ್ ಅವರ ಆಲ್ಬಂ ‘ಮಿಡ್‌ನೈಟ್ಸ್’ ವರ್ಷದ ಆಲ್ಬಮ್ ಅನ್ನು ಗೆದ್ದಿದೆ. ಮಿಲೀ ಸೈರಸ್ ಅವರ ಹಾಡು ‘ಫ್ಲವರ್’ ವರ್ಷದ ದಾಖಲೆ ಮತ್ತು ಅತ್ಯುತ್ತಮ ಪಾಪ್ ಶೋ ವಿಭಾಗಗಳಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ‘ವಾಸ್ ಐ ಮೇಡ್ ಫಾರ್’ ಹಾಡಿಗಾಗಿ ಬಿಲ್ಲಿ ಎಲಿಶ್ ಅವರು ‘ವರ್ಷದ ಹಾಡು’ ವಿಭಾಗದಲ್ಲಿ ಪ್ರಶಸ್ತಿ ಪಡೆದರು.

ಸೆಜಾ-ಫೋಬೆ ಬ್ರಿಡ್ಜರ್ಸ್ ಅವರ ಹಾಡು ‘ಘೋಸ್ಟ್ ಇನ್ ದಿ ಮೆಷಿನ್’ ಅತ್ಯುತ್ತಮ ಪಾಪ್ ಡ್ಯುಯೊ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸಂಗೀತ ಲೋಕದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿದೆ. ಒಟ್ಟು 94 ವಿಭಾಗಗಳಲ್ಲಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Share Post