BengaluruCinema

ಸೂಪರ್‌ ಸ್ಟಾರ್‌ ಉಪೇಂದ್ರರ ʻಯು ಐʼ ಚಿತ್ರದ ಚಿತ್ರೀಕರಣ ಆರಂಭ

ಬೆಂಗಳೂರು; ಖ್ಯಾತ ನಟ, ನಿರ್ದೇಶಕ ಉಪೇಂದ್ರ ನಿರ್ದೇಶನದ ʻಯು ಐʼ ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಇತ್ತೀಚೆಗೆ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆದಿತ್ತು. ನಟರಾದ ಶಿವರಾಜ್‌ಕುಮಾರ್‌, ಸುದೀಪ್, ಡಾಲಿ ಧನಂಜಯ, ವಸಿಷ್ಠ ಸಿಂಹ ಹೀಗೆ ಸ್ಯಾಂಡಲ್‌ವುಡ್‌ನ ಪ್ರಮುಖರ ಸಮ್ಮುಖದಲ್ಲೇ ಅದ್ಧೂರಿಯಾಗಿ ಸಿನಿಮಾ ಸೆಟ್ಟೇರಿತ್ತು. ಟೈಟಲ್‌ ಮೂಲಕವೇ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಇವತ್ತಿನಿಂದ ನಡೆಯುತ್ತಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗದೆ.

‘ತರ್ಲೆನನ್ಮಗ’ನಿಂದ ಹಿಡಿದು ‘ಶ್‌’, ‘ಓಂ’, ‘ಆಪರೇಷನ್‌ ಅಂತ’, ‘ಎ’, ‘ಸ್ವಸ್ತಿಕ್‌’, ‘ಉಪೇಂದ್ರ’, ‘ಸೂಪರ್‌’, ‘ಉಪ್ಪಿ–2’ ಹೀಗೆ ಉಪೇಂದ್ರ ಅವರು ಆ್ಯಕ್ಷನ್‌ ಕಟ್‌ ಹೇಳಿದ ಸಿನಿಮಾಗಳೆಲ್ಲವೂ ಹಿಟ್‌ ಆಗಿದ್ದವು. ‘ಯು ಐ’ ಎಂಬ ಮತ್ತೊಂದು ವಿಭಿನ್ನ ಶೀರ್ಷಿಕೆಯನ್ನಿಟ್ಟುಕೊಂಡು ಉಪೇಂದ್ರ ಅವರು ಮತ್ತೆ ಪ್ರೇಕ್ಷಕರ ಎದುರಿಗೆ ಬಂದಿದ್ದಾರೆ.

Share Post