Cinema

ಬುರ್ಜ್‌ ಖಲಿಫಾ ಮೇಲಿಂದ ಮಹೇಶ್‌ ಬಾಬು ಎದೆ ಝಲ್ಲೆನಿಸುವ ಬೈಕ್‌ ಸ್ಟಂಟ್

ದುಬೈ/ಹೈದರಾಬಾದ್:‌ ಮಹೇಶಬಾಬು ಜಾಹೀರಾತುಗಳಲ್ಲಿ ನಟನೆ ಮಾಡುತ್ತಿರುವುದು ಇದು ಹೊಸದೇನಲ್ಲ. ಇದೀಗ  ಮೌಂಟೇನ್ ಡ್ಯೂ ಕೂಲ್ಡ್ರಿಂಕ್ ಜಾಹೀರಾತಿಗೆ ಮಹೇಶ್ ಮತ್ತೊಮ್ಮೆ ಹಾಯ್ ಹೇಳಿದ್ದಾರೆ. ಮಹೇಶ್ ಸಿನಿಮಾಗಳಿಗೆ ಎಷ್ಟು ಶ್ರಮ ಪಡುತ್ತಾರೋ ಅಷ್ಟೇ ಜಾಹೀರಾತಿಗೂ ಕೆಲಸ ಮಾಡುತ್ತಾರೆ. ಈ ಹಿಂದೆ ಥಮ್ಸ್ ಅಪ್ ಜಾಹೀರಾತಿಗಾಗಿ ಅಪಾಯಕಾರಿ ಶಾಟ್‌ಗಳನ್ನು ಕೂಡ ಮಾಡಲಾಗಿತ್ತು. ಇದರಲ್ಲಿ ಕೆಲವು ಗ್ರಾಫಿಕ್ಸ್ ಮತ್ತು ಕೆಲವು ನೈಜತೆಯನ್ನು ಒಳಗೊಂಡಿತ್ತು.

ಈ ಹೊಸ ಜಾಹೀರಾತು ವಿಡಿಯೋವನ್ನು ಪ್ರಿನ್ಸ್ ಮಹೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಹೇಶ್ ದುಬೈನ ಬುರ್ಜ್ ಖಲೀಫಾ ಟವರ್ ಮೇಲಿಂದ ಸ್ಟಂಟ್‌ ಮಾಡುವ ವೇಳೆ ಮೌಂಟೇನ್ ಡ್ಯೂ ಕೂಲ್ಡ್ರಿಂಕ್ ಕುಡಿದು  ಬೈಕ್ ಸ್ಟಂಟ್‌ ಮಾಡುತ್ತಾ ಕೆಳಗೆ ಬಂದಿಳಿಯುತ್ತಾರೆ. ಬಂದ ಬಳಿಕ ಮೌಂಟೇನ್ ಡ್ಯೂ ಕುಡಿದು, ʻಗೆಲ್ಲಬೇಕಾದ್ರೆ ಭಯ ಪಡಬಾರದುʼ ಎಂಬ ಸ್ಲೋಗನ್‌ ಹೇಳಿದ್ದಾರೆ.  ಈ ಜಾಹೀರಾತನ್ನು ಹಲವಾರು ಬಾರಿ ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿ ಹೆಚ್ಚಾಗಿ ಗ್ರಾಫಿಕ್ಸ್ ಬಳಸಲಾಗಿದೆಯಂತೆ.

ಒಟ್ಟಿನಲ್ಲಿ ಮಹೇಶ್ ಸೇರಿದಂತೆ ಎಲ್ಲಾ ಸ್ಟಾರ್ ಹೀರೋಗಳು ಜಾಹೀರಾತಿಗೂ ಸೈ ಎಂದಿದ್ದಾರೆ. ಜಾಹೀರಾತಿನಲ್ಲೂ ಉತ್ತಮ ಸಂಭಾವನೆ ಇರುವ ಕಾರಣ ಬಹುತೇಕ ಸೆಲೆಬ್ರಿಟಿಗಳು ಜಾಹಿರಾತಿನಲ್ಲಿ ನಟಿಸುತ್ತಿದ್ದಾರೆ.

Share Post