International

1993ರ ಮುಂಬೈ ಸ್ಫೋಟ ಪ್ರಕರಣ; ಮೋಸ್ಟ್‌ ವಾಂಟೆಡ್‌ ಅಬುಬಕರ್‌ ಅರೆಸ್ಟ್‌

ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಬಕರ್ ನನ್ನು ಯುಎಇನಲ್ಲಿ ಬಂಧಿಸಲಾಗಿದೆ. ಈ ಮೂಲಕ  ಭಾರತದ ಪ್ರಮುಖ ಶೋಧ ಕಾರ್ಯಾಚರಣೆಯಲ್ಲಿ ಭಾರತೀಯ ಏಜೆನ್ಸಿಗಳಿಗೆ ದೊಡ್ಡ ಯಶಸ್ಸು ಲಭಿಸಿದೆ.

ಆರೋಪಿ ಅಬು ಬಕರ್, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ತರಬೇತಿ ನೀಡುತ್ತಿದ್ದ. ಅಷ್ಟೇ ಅಲ್ಲ, ಮುಂಬೈ ಸರಣಿ ಸ್ಫೋಟಗಳಲ್ಲಿ ಬಳಸಲಾದ ಆರ್‌ಡಿಎಕ್ಸ್ ಲ್ಯಾಂಡಿಂಗ್‌ನಲ್ಲಿ ಕೂಡಾ ಅಬುಬಕರ್‌ ಭಾಗಿಯಾಗಿದ್ದ. 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್  ಸ್ಫೋಟದ ಬಳಿಕ ಅಬು ಬಕರ್ ತಲೆಮರೆಸಿಕೊಂಡಿದ್ದ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಭಾರತೀಯ ಏಜೆನ್ಸಿಗಳ ಮಾಹಿತಿ ಆಧಾರದ ಮೇಲೆ ಅಬು ಬಕರ್ ನನ್ನು ಯುಎಇಯಲ್ಲಿ ಬಂಧಿಸಲಾಯಿತು.

1993ರಲ್ಲಿ ಮುಂಬೈನಲ್ಲಿ 12 ಕಡೆ ಸರಣಿ ಸ್ಫೋಟ ನಡೆಸಲಾಗಿತ್ತು. ಈ ಕೃತ್ಯದಲ್ಲಿ 257 ಮಂದಿ ಸಾವಿಗೀಡಾಗಿದ್ದರು. ಅಷ್ಟೇ 713 ಮಂದಿಗೆ ವಿವಿಧ ಅಂಗಗಳು ಊನವಾಗಿದ್ದವು.

 

Share Post