Cinema

ನಾಳೆ ಫಿಲಂ ಚೇಂಬರ್‌ ನಿಂದ ಸಭೆ

ಬೆಂಗಳೂರು: ಇತ್ತೀಚೆಗೆ ಚಿತ್ರರಂಗದ ಕೆಲಸ ಕಾರ್ಯದ ಚಟುವಟಿಕೆಗಳು ಶುರುವಾಗಿತ್ತು. ಇದ್ದರಿಂದ ಸ್ವಲ್ಪ ಮಟ್ಟಿಗೆ ಚಿತ್ರರಂಗ ಆರ್ಥಿಕವಾಗಿ ಸುಧಾರಿಸಿಕೊಳ್ಳವಷ್ಟರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಕೊರೋನಾ ಹಾಗೂ ಒಮಿಕ್ರಾನ್‌ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಈಗಾಗಲೇ ಸರ್ಕಾರ ನೈಟ್‌ ಕರ್ಫ್ಯೂ ಕೂಡ ಜಾರಿ ಮಾಡಿದೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಶೇ. ೧೦೦ ಆಸನಗಳಿಗೆ ಅನುಮತಿ ನೀಡಿತ್ತು. ಈ ಹಿನ್ನೆಲೆ ದೊಡ್ಟ ಸ್ಟಾರ್‌ ಸಿನಿಮಾ ರಿಲೀಸ್‌ ಆಗಿ ಭರ್ಜರಿಯಾಗಿ ಯಶಸ್ವಿ ಕಂಡಿತ್ತು. ಇನ್ನಷ್ಟು ಹೊಸ ಹೊಸ ಸಿನಿಮಾಗಳು ರಿಲೀಸ್‌ ಆಗುವಷ್ಟರಲ್ಲಿ ಮತ್ತೆ ಕೊರೋನಾ ಭೀತಿ ಎದುರಾಗಿದೆ.

ಹೌದು ನಗರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲ ನಿಯಮ ಸರ್ಕಾರ ಜಾರಿಗೊಳಿಸಿದೆ. ನಾಳೆಯಿಂದ ಶಾಲೆಗಳು ಬಂದ್‌ ಆಗಲಿವೆ. ಇದೀಗ ಚಿತ್ರಮಂದಿರಗಳಿಗೆ ೫೦-೫೦ ರೂಲ್ಸ್‌ ಜಾರಿಗೆ ತಂದಿದೆ. ನಗರದಲ್ಲಿ ವೀಕೆಂಡ್‌ ಕರ್ಫ್ಯೂ ಕೂಡ ವಿಧಿಸಿದ್ದಾರೆ. ಇದ್ದರಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಯಾಕೆಂದರೆ ಸಿಲಿಕಾನ್‌ ಸಿಟಿ ಮಂದಿ ಹೆಚ್ಚಾಗಿ ವೀಕೆಂಡ್‌ ನಲ್ಲೇ ಸಿನಿಮಾ ನೋಡುವುದಾಗಿತ್ತು. ಆದರೆ ವೀಕೆಂಡ್‌ ಕರ್ಫ್ಯೂ ಆಗಿದ್ದರಿಂದ ಚಿತ್ರರಂಗದ ಪರಿಸ್ಥಿತಿ ಏನು ಎಂಬ ಪ್ರಶ್ನೆ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಫಿಲ್ಮಂ ಚೇಂಬರ್‌  ಅಧ್ಯಕ್ಷರು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ವಾಣಿಜ್ಯ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ.

Share Post