Cinema

ಲೆಜೆಂಡರಿ ಕಥಕ್‌ ಕಲಾವಿದ ಪಂಡಿತ್‌ ಬಿರ್ಜೂ ಮಹಾರಾಜ್‌ ನಿಧನ

ನವದೆಹಲಿ : ಕಥಕ್‌ ನೃತ್ಯ ಕಲಾವಿದ ಬಿರ್ಜೂ ಮಹಾರಾಜ್‌ ಅವರು  ಇಂದು ಇಹಲೋಕ ತ್ಯಜಿಸಿದ್ದಾರೆ. ಪಂಡಿತ್‌ ಬಿರ್ಜೂ ಮಹಾರಾಜ್‌ ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿರುವ ಬಿರ್ಜೂ ಮಹಾರಾಜ್‌ ಅವರು ಅದ್ಭುತ ಕಥಕ್‌ ನೃತ್ಯಗಾರರಾಗಿದ್ದರು. ತೀವ್ರ ಹೃದಯಾಘಾತದಿಂದ ಇಂದು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ.

1937, ಫೆಬ್ರುವರಿ 4 ರಂದು ಜನಿಸಿದ್ದ ಬಿರ್ಜೂ ಬಾಲ್ಯದಿಂದಲೇ ತಮ್ಮ ತಂದೆಯೊಂದಿಗೆ ಪ್ರದರ್ಶನ ನೀಡುತ್ತಿದ್ದರು ಹಾಗಾಗಿ ಹದಿಹರೆಯದ ವಯಸ್ಸಿನಲ್ಲಿಯೇ ಅವರು ಗುರು ಆಗಿ ಬಿಟ್ಟರು. ರಾಂಪುರ ನವಾಬನ ದರ್ಬಾರ್‌ನಲ್ಲಿಯೂ ಪ್ರದರ್ಶನ ನೀಡುವ ಮೂಲಕ ಪ್ರಖ್ಯಾತಿಗಳಿಸಿದ್ದರು.

Share Post