ನಟ ಕಮಲ್ ಹಾಸನ್‌ಗೆ ತೀವ್ರ ಜ್ವರ; ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲು
ಚೆನ್ನೈ; ಖ್ಯಾತ ಬಹುಭಾಷಾ ನಟ ಕಮಲ ಹಾಸನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲದಿನಗಳಿಂದ ಕಮಲ್ ಹಾಸನ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಮನೆಯಲ್ಲೇ ಚಿಕಿತ್ಸೆ ಪಡೆದರೂ ಜ್ವರ ವಾಸಿಯಾಗಿಲ್ಲ. ಈ ಕಾರಣದಿಂದ ಅವ್ರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಅಭಿಮಾನಗಳಲ್ಲಿ ಆತಂಕ ಮನೆ ಮಾಡಿದೆ. ಹಲವರು ಕಮಲ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಕೂಡಾ ಸಲ್ಲಿಸಿದ್ದಾರೆ. ಕಮಲ್ ಹಾಸನ್‌ಗೆ ಈಗ ಜ್ವರ ಕಡಿಮೆಯಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಡಿಸ್‌ಚಾರ್ಜ್ ಆಗಲಿದ್ದಾರೆ. ಯಾವುದೇ ಭಯ ಬೇಡ ಎಂದು ವೈದ್ಯರು ಹೇಳಿದ್ದಾರೆ.