BengaluruCinema

ಕಾದಂಬರಿ ಆಧರಿತ ಚಿತ್ರ ಮಾಡಲು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಒಲವು

ಬೆಂಗಳೂರು; ಪುನೀತ್‌ ರಾಜ್‌ಕುಮಾರ್‌ ಅವರು ಪಿಆರ್‌ಕೆ ಪ್ರೊಡಕ್ಷನ್ಸ್‌ ಶುರು ಮಾಡಿದ್ದರು. ಈಗ ಅದನ್ನು ಅವರ ಪತ್ನಿ ಅಶ್ವಿನಿಯವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ವಿಶೇಷ ಅಂದ್ರೆ ಅಶ್ವಿನಿಯವರು ಕಾದಂಬರಿ ಆಧರಿತ ಚಿತ್ರಗಳನ್ನು ಮಾಡಲು ಆಸಕ್ತಿ ತೋರಿಸಿದ್ದಾರೆ. ಅದ್ರಲ್ಲೂ ಮಹಿಳಾ ನಿರ್ದೇಶಕರು ಸಿನಿಮಾ ಮಾಡುವುದಾದರೆ ಅವರಿಗೆ ಚಿತ್ರ ನಿರ್ಮಾಣ ಮಾಡುವುದಾಗಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೇಳಿಕೊಂಡಿದ್ದಾರೆ. 

ಡಾ.ರಾಜ್‌ಕುಮಾರ್‌ ಅವರು ಕಾದಂಬರಿ ಆಧರಿತ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿದ್ದರು. ಪಾರ್ವತಮ್ಮ ರಾಜ್‌ಕುಮಾರ್‌ ಕೂಡಾ ಕಾದಂಬರಿ ಆಧರಿತ ಕಥೆಗಳ ಕಡೆಗೇ ಹೆಚ್ಚು ಒಲವು ತೋರಿಸುತ್ತಿದ್ದರು. ಇದೀಗ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಕೂಡಾ ಆ ಹಾದಿಯಲ್ಲಿದ್ದಾರೆ. ಅವರು ಈಗಾಗಲೇ ಒಂದು ಕಾದಂಬರಿ ಕೂಡಾ ಓದಲು ಶುರು ಮಾಡಿದ್ದಾರಂತೆ.

ತಮ್ಮ ಬ್ಯಾನರ್‌ನಡಿ ಹೊಸ ನಿರ್ದೇಶಕರಿಗೆ, ಹೊಸ ಕಲಾವಿದರಿಗೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡೋದಾಗಿ ಅಶ್ವಿನಿಯವರು ಹೇಳಿಕೊಂಡಿದ್ದಾರೆ. ಮೊದಲಿನಿಂದಲೂ ನನಗೆ ಪುಸ್ತಕ ಓದುವ ಹವ್ಯಾಸವಿತ್ತು. ಈಗ ಸಿನಿಮಾಗಾಗಿ ಕಾದಂಬರಿಗಳನ್ನು ಓದುತ್ತಿದ್ದೇನೆ. ಸದ್ಯ ಸಿನಿಮಾ ಆಗುವಂತಹ ಒಂದು ಕಾದಂಬರಿ ಓದುತ್ತಿದ್ದೇನೆ. ಅದು ಯಾವ ಕಾದಂಬರಿ..? ಯಾರು ಬರೆದ ಕಾದಂಬರಿ..? ಅನ್ನೋದನ್ನು ಮುಂದಿನ  ದಿನಗಳಲ್ಲಿ ತಿಳಿಸುತ್ತೇನೆ ಎಂದೂ ಅಶ್ವಿನಿಯವರು ಹೇಳಿದ್ದಾರೆ.

 

Share Post